ಭಾಲ್ಕಿ: ನನ್ನ ಜನ್ಮದಿನ (ಜ.15)ವನ್ನು ಈ ಬಾರಿ ಸಾರ್ವಜನಿಕವಾಗಿ ಆಚರಿಸಿಕೊಳ್ಳದಿರಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಬರದ ಛಾಯ ಆವರಿಸಿದೆ. ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸಾರ್ವಜನಿಕವಾಗಿ ಜನ್ಮದಿನ ಆಚರಣೆ ಮಾಡಿಕೊಳ್ಳುವುದು ಸೂಕ್ತವಲ್ಲ. ಅಲ್ಲದೆ ಜ.14ರಿಂದ 16 ರವರೆಗೆ ಸ್ಥಳೀಯವಾಗಿ ಲಭ್ಯ ಇರುವುದಿಲ್ಲ. ಹೀಗಾಗಿ ಕಾರ್ಯಕರ್ತರು, ಅಭಿಮಾನಿಗಳು ನನ್ನ ಜನ್ಮದಿನದ ನಿಮಿತ್ತ ಅನಗತ್ಯವಾಗಿ ಹಣ ಖರ್ಚು ಮಾಡಿ ಬ್ಯಾನರ್, ಕಟೌಟ್ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಬೇಡಿ. ಇರುವ ಸ್ಥಳದಿಂದಲೇ ನನಗೆ ಆಶೀರ್ವದಿಸಿ, ಶೂಭಹಾರೈಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.