ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಕನ್ನಡ ಭಾಷೆ ಅಳಿವಿನಂಚಿನಲ್ಲಿತ್ತು. ಆ ಸಂದರ್ಭದಲ್ಲಿ (1975ರ ದಶಕದಲ್ಲಿ) ಆರ್.ವಿ.ಬಿಡಪ್ ಅವರು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ತೆರೆದರು. ಇಲ್ಲಿ ಎಲ್ ಕೆಜಿ ಯಿಂದ ಸಂಸ್ಥೆ ಆರಂಭಿಸಿ ಹೆಮ್ಮರವಾಗಿ ಬೆಳೆಸಿದ ಕೀರ್ತಿ ಬಿಡಪ್ ಅವರಿಗೆ ಸಲ್ಲುತ್ತದೆ ಎಂದು ಕೆಆರ್ಇ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಜಾಬಶೆಟ್ಟಿ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಆರ್.ವಿ.ಬಿಡಪ್ 17ನೇ ಪುಣ್ಯಸ್ಮರಣೆ ನಿಮಿತ್ತ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಬಿಡಪ್ ದೊಡ್ಡ ಶಿಕ್ಷಣ ತಜ್ಞರಾಗಿದ್ದರು. ದೂರದೃಷ್ಟಿ ಇಟ್ಟುಕೊಂಡು ಸಂಸ್ಥೆ ಸ್ಥಾಪಿಸಿದರು. ಇಲ್ಲಿ ಸಾವಿರಾರು ಶಿಕ್ಷಕರು ಬದುಕು ಕಟ್ಟಿಕೊಂಡಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿವಿಧ ಹುದ್ದೆಗಳಲ್ಲಿದ್ದಾರೆ. ಇದಿನ ಪೀಳಿಗೆಗೆ ಬಿಡಪ್ ಅವರ ಬದುಕು ಆದರ್ಶಮಯವಾಗಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಬಿ.ಜಿ.ಶೆಟಕಾರ್, ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ್, ನಿರ್ದೇಶಕರಾದ ವೀರಭದ್ರಪ್ಪ ಬುಯ್ಯಾ, ಸಿದ್ಧರಾಜ ಪಾಟೀಲ್, ರಾಜಶೇಖರ ತಾಂಡೂರೆ, ಮಲ್ಲಿಕಾರ್ಜುನ ಹತ್ತಿ, ಬಿಡಪ್ ಪುರಸ್ಕಾರ ಸಮಿತಿ ಸಂಚಾಲಕ ಡಾ.ಜಗನ್ನಾಥ ಹೆಬ್ಬಾಳೆ, ಬಿಡಪ್ ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರೊ. ಮುನಿಯಪ್ಪ ಇತರರಿದ್ದರು.