ಬೀದರ್: ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ವತಿಯಿಂದ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನ ಆಚರಿಸಲಾಯಿತು.
ಜಕಣಾಚಾರಿ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪೂಜೆ ಸಲ್ಲಿಸಿದರು.
ಚಿಂತಕ ವಿಜಯಕುಮಾರ ಪಂಚಾಳ ಮಾತನಾಡಿ, ಭಾರತೀಯ ಶಿಲ್ಪಕಲಾ ಕೌಶಲಕ್ಕೆ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು, ಹಂಪಿ ಸೇರಿದಂತೆ ದೇಶದ ಶಿಲ್ಪಕಲೆಯನ್ನು ಅವರು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.
ವಿಶ್ವದ ಗಮನ ಸೆಳೆದಿರುವ ಶಿಲ್ಪಕಲೆಯ ಖ್ಯಾತ ಕಲಾವಿದರು ಇಂದಿಗೂ ನಾಡಿನಲ್ಲಿದ್ದಾರೆ ಎಂದು ತಿಳಿಸಿದರು.
ಜಕಣಾಚಾರಿ ಅವರ ಕಲೆಯಿಂದಾಗಿಯೇ ವಿಶ್ವಕರ್ಮ ಸಮುದಾಯದವರು ಅಯೋಧ್ಯೆಯ ನೂತನ ರಾಮ ಮಂದಿರ ನಿರ್ಮಾಣಕ್ಕೂ ಕೊಡುಗೆ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾಯಕ ಯಾವುದೇ ಆಗಿರಲಿ ನಿಷ್ಠೆಯಿಂದ ಮಾಡಿದ್ದಲ್ಲಿ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಂಚಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಧರ್ಮ ವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ವಿಶ್ವಕರ್ಮ, ಪ್ರಮುಖರಾದ ಶಾಮರಾವ್, ನಾರಾಯಣ, ಪಾಂಡುರಂಗ ಮನ್ನಳ್ಳಿ, ಬಾಬುರಾವ್ ಚಿಮಕೋಡ್, ಈರಣ್ಣ ವಿಜಯಕುಮಾರ, ಜಯಪ್ರಕಾಶ, ಸಿದ್ಧಾರೂಢ, ಪಾಂಡುಂಗ, ರವಿ, ಸಂಜುಕುಮಾರ, ಈಶ್ವರ, ಸುಭಾಷ್, ವೈಜಿನಾಥ, ಕಾಶೀನಾಥ, ಬಿ.ಕೆ. ಬಡಿಗೇರ, ವಿಶ್ವನಾಥ, ಸಂಜು, ಉಮೇಶ, ಬಾಬುರಾವ್ ಚಾಂಬೋಳ, ಪ್ರಶಾಂತ ಇದ್ದರು.