ಜಿಲ್ಲೆ

ಗಾಂಧಿಗಂಜ್ ಅಸೋಸಿಯೇಷನ್ ಗೆ ಧನ್ನೂರ್ ಅಧ್ಯಕ್ಷ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಗಾಂಧಿಗಂಜ್ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಗೆ ಎರಡನೇ ಸಲ ಅಧ್ಯಕ್ಷರಾಗಿ ಬಸವರಾಜ ಧನ್ನೂರ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳಲ್ಲಿ ನಾಗಶೆಟ್ಟಿ ದಾಡಗಿ ಕುಂಬಾರವಾಡ (ಉಪಾಧ್ಯಕ್ಷ), ಭಗವಂತ ಔದತಪುರ (ಕಾರ್ಯದರ್ಶಿ), ನಾಗಶೆಟ್ಟಿ ಕಾರಾಮುಂಗಿ (ಸಹ ಕಾರ್ಯದರ್ಶಿ), ಬಂಡೆಪ್ಪ (ಕೋಶಾಧ್ಯಕ್ಷ), ಬಾಲಾಜಿ, ರಾಜಕುಮಾರ ಗುನ್ನಳ್ಳಿ, ಸೋಮನಾಥ ಗಂಗಶೆಟ್ಟಿ, ಶಿವಾನಂದ ಗುನ್ನಳ್ಳಿ, ನರಸಿಂಗ ಹಾಗೂ ರಾಜಕುಮಾರ ಬಸವಣ್ಣನವರ್ (ನಿರ್ದೇಶಕರು). ತಮ್ಮ ಅಧಿಕಾರ ಅವಧಿಯಲ್ಲಿ ಗಾಂಧಿಗಂಜ್ ವ್ಯಾಪಾರಿಗಳ ಹಿತರಕ್ಷಣೆಗೆ ಶ್ರಮಿಸಲಾಗುವುದು. ಅಸೋಸಿಯೇಷನ್ ಬರುವ ದಿನಗಳಲ್ಲಿ ನೂತನ ಮಾರುಕಟ್ಟೆ ಸ್ಥಾಪನೆಗೆ ಸರ್ವ ಪ್ರಯತ್ನ ಮಾಡಲಿದೆ. ವ್ಯಾಪಾರಿಗಳು, ರೈತರು ಮತ್ತು ಕೂಲಿ ಕಾರ್ಮಿಕರ ಹಿತಕ್ಕೆ ಪೂರಕವಾಗಿ ವಿವಿಧ ಚಟುವಟಿಕೆ ನಡೆಸಲಿದೆ ಎಂದು ಧನ್ನೂರ್ ತಿಳಿಸಿದರು.
ನೂತನ ಅಧ್ಯಕ್ಷ-ಪದಾಧಿಕಾರಿಗಳನ್ನು ಗಾಂಧಿಗಂಜ್ ಅಸೋಸಿಯೇಷನ್ ಕಚೇರಿಯಲ್ಲಿ ವ್ಯಾಪಾರಿಗಳು ಸನ್ಮಾನಿಸಿ ಅಭಿನಂದಿಸಿದರು. ಮೂರು ವರ್ಷ ಅವಧಿ ಚುನಾವಣೆಯಲ್ಲಿ ಧನ್ನೂರ್ ನೇತೃತ್ವದ ಪೆನಾಲ್ ಬಹುಮತ ಗಳಿಸಿದೆ.