ಬಸವಕಲ್ಯಾಣ: ಮೇಲು-ಕೀಳು, ಜಾತಿ, ಲಿಂಗ ತಾರತಮ್ಮ ಮಾಡುವ, ಹಿಂದುಳಿದವರ ವಿರೋಯಾದ ಮನುಸ್ಮೃತಿ ಸಮಾನತೆಗೆ ವಿರುದ್ಧವಾಗಿದೆ. ಎಲ್ಲರೂ ಎಚ್ಚೆತ್ತುಕೊಂಡು ಸಂವಿಧಾನವನ್ನು ಉಳಿಸಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಂಥ ಕೆಲಸ ಮಾಡಬೇಕು ಎಂದು ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಅಪೂರ್ಣ ಹೇಳಿದರು.
ತಾಲೂಕಿನ ಪರ್ತಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮನುಸ್ಮೃತಿ ದಹನ ದಿನಾಚರಣೆ ಹಾಗೂ ಕ್ರಾಂತಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು. ಅದರ ನೆನಪಿಗಾಗಿ ಪ್ರತಿ ವರ್ಷ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತದ ಇತಿಹಾಸದಲ್ಲಿ ಸಾಮಾಜಿಕವಾಗಿ ಅತ್ಯಂತ ಕೆಟ್ಟದಾದ ಗ್ರಂಥ ಮನುಸ್ಮೃತಿ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲಿಲ್ಲ. ಇಂಥ ತತ್ವಗಳು ಒಳಗೊಂಡ ಈ ಗ್ರಂಥವನ್ನು ಬಾಬಾ ಸಾಹೇಬರು ದಹಿಸಿದ್ದರು ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯಕ್ಷ ಪಿಂಟು ಕಾಂಬ್ಳೆ ಮಾತನಾಡಿ. ಜನಗಣಮನ ಗೀತೆಯನ್ನು ದೇಶದಲ್ಲಿ ಮೊದಲು ಬಾರಿಗೆ ಕೋಲ್ಕತ್ತದಲ್ಲಿ 1911ರಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿ ಹಾಡಲಾಗಿತ್ತು. ಅದರ ನೆನಪಿಗಾಗಿ ಕ್ರಾಂತಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಬೌದ್ಧಚಾರ್ಯ ರವೀಂದ್ರ ಗುರೂಜಿ, ದಲಿತ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಸಿಕಂದರ ಸಿಂಧೆ, ಗೌತಮ ಜಾಂತೆ, ನಾಗೇಶ ಕಾಂಬ್ಳೆ, ಚಂದ್ರಕಾಂತ, ದತ್ತಾತ್ರೇಯ ಸೂರ್ಯವಂಶಿ, ಬಾಲಾಜಿ ಕಾಂಬ್ಳೆ, ಬಾಲಾಜಿ ಸಂಗೋಳಗಿ, ಭಾವುರಾವ ಕಾಂಬ್ಳೆ, ಮನೋಹರ್ ಕಾಂಬ್ಳೆ, ಬುದ್ಧಾನಂದ ಗಾಯಕವಾಡ, ಪ್ರಭಾವತಿ ಗಾಯಕವಾಡ, ಶಾಂತಾ ಗಾಯಕವಾಡ, ಬಬಿತಾ ಗಾಯಕವಾಡ, ಆಹುಬಾಯಿ ಸೂರ್ಯವಂಶಿ, ವಂದನಾ ಗಾಯಕವಾಡ, ಅರುಣಾ ಸೂರ್ಯವಂಶಿ, ವೈಶಾಲಿ ಕಾಂಬ್ಳೆ, ಸುವರ್ಣ ಕಾಂಬ್ಳೆ ಇತರರಿದ್ದರು.