ಹುಮನಾಬಾದ್: ಕಬಡ್ಡಿ, ಖೋಖೋ ಸೇರಿದಂತೆ ದೇಸಿ ಕ್ರೀಡೆಗಳನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡರ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ರಾಮ ಮತ್ತು ರಾಜ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ ದೇಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ದೇಸಿ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಒಲಿಂಪಿಕ್ಸ್ ನಲ್ಲಿ ದೇಸಿ ಕ್ರೀಡೆಗಳು ಸೇರಿಸಬೇಕು. ದೇಸಿ ಕ್ರೀಡೆಗಳಿಂದ ಭಾರತೀಯ ಸಂಸ್ಕೃತಿ ಉಳಿಯಲಿದೆ ಎಂದರು.
ಸಂಸ್ಥೆ ಅಧ್ಯಕ್ಷ ರಮೇಶ ಗಾದಾ ಮಾತನಾಡಿ, ವಿದ್ಯಾರ್ಥಿಗಳ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಅಗತ್ಯ ಇದ್ದಾಗ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಪಠ್ಯ ಶಿಕ್ಷಣ ಜತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ, ಬೀದರ್ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಸಂತೋಷ ಮಾಕಾ, ಸಂಸ್ಥೆಯ ಸದಸ್ಯರಾದ ನಾರಾಯಣರಾವ ಜಾಜಿ, ವೆಂಕಟೇಶ ಜಾಜಿ, ಹರೀಶ್ ಅಗಡಿ, ನಾಗರಾಜ ವಾಸಗಿ, ಅನೀಲ ಪಲ್ಲೆರಿ, ಶಿಕ್ಷಣ ಸಂಯೋಜಕ ಮಾಧವ ಮೇತ್ರೆ, ರಾಮಚಂದ್ರ ವೀರಪ್ಪ ಆರ್ಯ ಕಾಲೇಜು ಪ್ರಾಚಾರ್ಯ ಗಿರೀಶ್ ಕಠಳ್ಳಿ, ರಾಮ ಮತ್ತು ರಾಜ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಮಲ್ಲಿನಾಥ ಚಿಂಚೋಳಿಕರ್, ಗೋಪಾಲ ಜಾಮಾದಾರ ಇತರರಿದ್ದರು.