??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಗುರುವಿನ ಮಹತ್ವ ಉಳಿಸಿ-ಬೆಳೆಸಿ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ದೊಡ್ಡದಾಗಿದ್ದು, ಅದರ ಪಾವಿತ್ರ್ಯತೆ, ಮಹತ್ವ ಉಳಿಸಿ-ಬೆಳೆಸಿಕೊಂಡು ಹೋಗಬೆಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ್ ಹುಸೇನ್ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಗಾಂಧಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಸಮಾಗಮ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಯಾರಿಗೂ ಸಿಗದ ಮರ್ಯಾದೆ, ಗೌರವ ಗುರುಗಳಿಗೆ ಸಿಗುವುದರಿಂದ ನಮ್ಮ ಬೋಧನೆ ಯಾವಾಗಲೂ ಎಲ್ಲ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ನೀಡುವಂತಿರಬೇಕು ಎಂದು ಹೇಳಿದರು.
ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿವದೇವ ಸ್ವಾಮಿ ನಾವದಗಿಯ ನೇತೃತ್ವದಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು, ಗುರುವಂದನೆ ಮಾಡುತ್ತಿರುವುದು ಶ್ಲಾಘನೀಯ. ಸುಮಾರು 30 ವರ್ಷ ನಂತರವೂ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು, ಅವರಿಗೆ ವಂದಿಸುವ ಕಾರ್ಯ ಮಾದರಿ. ಉಜ್ವಲ ಜೀವನ ನಿರ್ಮಿಸಬೇಕಾದರೆ ಗುರುವಿನ ಉತ್ತಮ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿ ಶಿವದೇವ ಸ್ವಾಮಿ ನಾವದಗಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧಕರು, ದೇಶದ ಅತ್ಯುತ್ತಮ ನಾಗರಿಕರನ್ನು ಸೃಷ್ಟಿ ಮಾಡುವ ಮಹತ್ತರ ಹೊಣೆ ಶಿಕ್ಷಕರ ಮೇಲಿದೆ. ವಿದ್ಯಕಲಿಸಿದ ಗುರುಗಳು ಮತ್ತು ಜನ್ಮ ನೀಡಿದ ತಂದೆ-ತಾಯಿ ಋಣ ತೀರಿಸಲು ಸಾಧ್ಯವಿಲ್ಲ. ಗುರುಗಳನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ್, ನಿವೃತ್ತ ಶಿಕ್ಷಕರಾದ ಜಯರಾಜ ದಾಬಶೆಟ್ಟಿ, ಮನೋಹರ ಮೇತ್ರೆ, ಶ್ರೀರಂಗ ಸೋಮವಂಶಿ ಮಾತನಾಡಿದರು. ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಿಂಗೆ ಅಧ್ಯಕ್ಷತೆ ವಹಿಸಿದರು. ಸಿದ್ದಯ್ಯಾ ಸ್ವಾಮಿ, ನಾಮದೇವ ಸಿಂಗಾರೆ, ಧನರಾಜ ಕುಂಬಾರ, ದೀಪಕ ಗಾಯಕವಾಡ, ರಂಗರಾವ ಬಿರಾದಾರ್, ಗುರಪ್ಪ ತರನಳ್ಳೆ, ಮನೋಹರ ಮೇತ್ರೆ, ಜಯರಾಜ ದಾಬಶೆಟ್ಟಿ, ಶಾಂತಕುಮಾರ ಮಾಸಿಮಾಡೆ, ಯುವರಾಜ ಪಾಟೀಲ್, ಶ್ರೀರಂಗ ಸೋಮವಂಶಿ, ಪಂಡಿತ ಕುಲಕರ್ಣಿ, ಶಿವಶರಣಪ್ಪ ಸೋನಾಳೆ, ಶೋಭಾ ಮಾಸಿಮಾಡೆ ಅವರನ್ನು ಸನ್ಮಾನಿಸಲಾಯಿತು.
ಹಣಮಂತಪ್ಪ ಕಲವಾಡಿಕರ್, ಡಾ.ಸಂಜಯ ಕುಲಕರ್ಣಿ, ವೈಜಿನಾಥ ಮಲ್ಲಿಗೆ, ರಣರ ನಾವದಗಿ, ಶಿವಾನಂದ, ಶಿವಕುಮಾರ ವಾಡಿಕರ್, ಪ್ರದೀಪ ಜೋಳದಪಾಕೆ ಇತರರಿದ್ದರು. ಪ್ರವೀಣ ಸ್ವಾಗತಿಸಿದರು. ವೈಜಿನಾಥ ನಿರೂಪಣೆ ಮಾಡಿದರು. ರಣಧೀರ ವಂದಿಸಿದರು.