ಜಿಲ್ಲೆ

ಸರ್ಕಾರಿ ಶಾಲೆ ಮಕ್ಕಳಿಗಾಗಿ ಪ್ರತಿಭಾ ಉತ್ಸವ 21ರಂದು

ರೇವಣಸಿದ್ದಪ್ಪ ಪಾಟೀಲ್

ಔರಾದ್: ಕ್ರಿಸ್ಮಸ್ ನಿಮಿತ್ತ ತಾಲೂಕಿನ 6ರಿಂದ 10ನೇ ತರಗತಿ ಸರ್ಕಾರಿ ಶಾಲೆ ಮಕ್ಕಳಿಗಾಗಿ ಪ್ರತಿಭಾ ಉತ್ಸವವನ್ನು ಎಕಂಬಾದ ಸೇಂಟ್ ಪೌಲ್ ಚರ್ಚ್ ನಲ್ಲಿ ಡಿ.21ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್ ಮುಖ್ಯಸ್ಥ ಫಾದರ್ ಅನೀಲ ಕ್ರಾಸ್ತಾ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಾಲ್ಕು ವಿಶೇಷ ಸ್ಪರ್ಧೆ ಏರ್ಪಡಿಸಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ಮಕ್ಕಳಿಗೆ ನಗದು ಬಹುಮಾನ ಜತೆಗೆ ಪ್ರಮಾಣಪತ್ರ ವಿತರಿಸಲಾಗುವುದು. ಹೆಚ್ಚು ಬಹುಮಾನ ಗಳಿಸಿದ ಶಾಲೆಗೆ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಲಾಗುವುದು. ಸರ್ಕಾರಿ ಶಾಲಾ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳು ಮಕ್ಕಳು ಭಾಗವಹಿಸಬೇಕು. ಮಾಹಿತಿಗಾಗಿ ಮೊ.78479 77779ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.