ಜಿಲ್ಲೆ

ದತ್ತಾತ್ರೇಯ ಜಾತ್ರಾ ಮಹೋತ್ಸವ ಅದ್ದೂರಿ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದ 36ನೇ ಜಾತ್ರಾ ಮಹೋತ್ಸವ ಡಿ.26ರಂದು ಅದ್ದೂರಿ ಜತೆ ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಯಿತು.
ಪಟ್ಟಣದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀ ಶಂಕರಲಿಂಗ ಶಿವಾಚಾರ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಜರುಗಿತು. ಜಾತ್ರೆಗೆ 40 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ. ಯಾವುದೇ ಸಮಸ್ಯೆ ಆಗದಂತೆ ಅದ್ದೂರಿಯಾಗಿ ಮಾಡಲು ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಿ ಪದಾಕಾರಿಗಳನ್ನು ನೇಮಿಸಲಾಯಿತು.
ಸ್ವಾಗತ ಸಮಿತಿ: ಕಿರಣ ಉಪ್ಪೆ (ಅಧ್ಯಕ್ಷ), ಬಸವರಾಜ ದೇಶಮುಖ (ಗೌರವಾಧ್ಯಕ್ಷ), ಸುನೀಲಕುಮಾರ ದೇಶಮುಖ, ಡಾ.ಧನರಾಜ ರಾಗಾ, ಶರಣಪ್ಪ ಪಾಟೀಲ್, ಚಂದ್ರಶೇಖರ ಪಾಟೀಲ್, ರಾಜಕುಮಾರ ಎಡವೆ, ಸಂಗಯ್ಯ ಸ್ವಾಮಿ, ಡಾ.ನಾಗೇಶ ಕೌಟಗೆ, ಬಸವರಾಜ ಶೆಟಕಾರ, ತಿಪ್ಪರಡ್ಡಿ (ಸದಸ್ಯರು). ಪ್ರಚಾರ: ಶರಣಪ್ಪ ಚಿಟಮೆ (ಅಧ್ಯಕ್ಷ), ಅಂಬಾದಾಸ ನೇಳಗೆ, ಚಂದು ಡಿ.ಕೆ., ರತ್ನದೀಪ (ಸದಸ್ಯರು). ದಾಸೋಹ: ಬಂಟಿ ದರ್ಬಾರೆ (ಅಧ್ಯಕ್ಷ), ವೀರೇಶ ಅಲ್ಮಾಜೆ, ದಯಾನಂದ ಘೂಳೆ, ಸದ್ದಾಂ, ಬಬಲು, ದಿಗಂಬರ, ಮಹಾದೇವ ಮುದ್ದಾ, ವೀರೇಶ ಸ್ವಾಮಿ, ರಾಜು ಮುದಾಳೆ, ಕಾಮಶೆಟ್ಟಿ ದ್ಯಾಡೆ (ಸದಸ್ಯರು). ಭಜನೆ ನಿರ್ವಹಣೆ: ಸಂಗಮೇಶ ಬೆಲ್ದಾಳ (ಅಧ್ಯಕ್ಷ), ಪುರುಷೋತ್ತಮ ದೇಸಾಯಿ, ಮಾಣಿಕ ಗುಡುರೆ, ಅಮರ ಮೊಕ್ತೆದಾರ, ಗಣಪತಿ ಮೊಕ್ತೆದಾರ, ಮಾರುತಿ ಮೇತ್ರೆ (ಸದಸ್ಯರು).
ಅಲಂಕಾರ: ಅಶೋಕ ಶೆಂಬೆಳ್ಳಿ (ಅಧ್ಯಕ್ಷ), ಅನೀಲ ಮೇತ್ರೆ, ರಮೇಶ ವಾಘಮಾರೆ, ಮಲ್ಲಿಕಾರ್ಜುನ ಟೇಕರಾಜ್, ಅಮರ ಜ್ಯಾಂತೆ (ಸದಸ್ಯರು). ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ: ಸಂಜೀವಕುಮಾರ ಶೆಟಕಾರ (ಅಧ್ಯಕ್ಷ), ಅನೀಲ ಹೇಡೆ, ಅಶೋಕ ಶೆಂಬೆಳ್ಳಿ, ಅನೀಲ ದೇವಕತ್ತೆ, ಕೃಷ್ಣಾ ಪಾಟೀಲ್, ವಿವೇಕ ನಿರ್ಮಳೆ, ಶಾಲಿವಾನ ಉದಗೀರೆ (ಸದಸ್ಯರು).
ಸ್ವಚ್ಛತಾ ಸಮಿತಿ: ಅನೀಲ ದೇವಕತ್ತೆ (ಅಧ್ಯಕ್ಷ), ವೀರೇಶ ಸ್ವಾಮಿ, ಪ್ರಶಾಂತ ಸ್ವಾಮಿ, ಪ್ರಶಾಂತ, ಮಹಾದೇವ (ಸದಸ್ಯರು). ವಾಣಿಜ್ಯ ಮಳಿಗೆ: ಶಂಕು ನಿಶ್ಪತ್ತೆ (ಅಧ್ಯಕ್ಷ), ಸಂತೋಷ ದ್ಯಾಡೆ, ಮಹಾದೇವ ಮುದ್ದಾ (ಸದಸ್ಯರು). ಮಹಿಳಾ ಸಮಿತಿಗೆ ನೀಲಮ್ಮ ಚಲುವಾ (ಅಧ್ಯಕ್ಷೆ), ಜ್ಯೋತಿ ಅಲ್ಮಾಜೆ, ರಾಚಮ್ಮ ಉಮಾಕಾಂತ, ಸುನೀತಾ ಮುದ್ದಾ, ಜ್ಯೋತಿ ಮಾಳಗೆ, ಜಯಶ್ರೀ ದ್ಯಾಡೆ, ಸಂಗೀತಾ, ಶ್ರೀದೇವಿ ನವಾಡೆ, ಸವಿತಾ ಶೆಟಕಾರ, ವನಿತಾ ರಾಗಾ, ಜ್ಯೋತಿ ಗುಡುರೆ, ಸುರೇಖಾ ಪಂಚಾಕ್ಷರಿ (ಸದಸ್ಯರು) ಅವರನ್ನು ನೇಮಕ ಮಾಡಲಾಗಿದೆ.