???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಗಂಡು-ಹೆಣ್ಣು ತಾರತಮ್ಯ ಮಾಡದಿರಿ

ರೇವಣಸಿದ್ದಪ್ಪ ಪಾಟೀಲ್

ಕಮಲನಗರ: ಗುಂಡು-ಹೆಣ್ಣು ಎಂಬ ತಾರತಮ್ಯ ತೋರಿಸಬಾರದು. ಪಾಲಕರು ಎಲ್ಲ ಮಕ್ಕಳನ್ನು ಸಮನಾಗಿ ಕಾಣಬೇಕು ಎಂದು ಖೇಡ ಗ್ರಾಪಂ ಪಿಡಿಒ ರಾಮದಾಸ ಬೇಲೂರೆ ಹೇಳಿದರು.
ಹೇಮರಡ್ಡಿ ಮಲ್ಲಮ್ಮ ಸಂಜೀವಿನ ಮಹಿಳಾ ಒಕ್ಕೂಟ, ಗ್ರಾಮ ಪಂಚಾಯಿತಿ ಸಹಯೋಗದಡಿ ಸಂಗಮದಲ್ಲಿ ಆಯೋಜಿಸಿದ್ದ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗಂಡು ಮಗು ಜನಿಸಿದಾಗ ಪಟ್ಟ ಸಂಭ್ರಮದಂತೆ ಹೆಣ್ಣು ಹುಟ್ಟಿದಾಗಲೂ ಸಂತಸಪಡಬೇಕು. ಆ ಮೂಲಕ ಮಕ್ಕಳಲ್ಲಿನ ತಾರತಮ್ಯ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.
ಮಹಿಳೆಯರು ಸಂಘಟಿತರಾಗಿ ಆರ್ಥಿಕ, ಶೈಕ್ಷಣಿಕವಾಗಿ ಸಬಲರಾದಾಗ ಮಾತ್ರ ದೌರ್ಜನ್ಯ ತಡೆಯಲು ಸಾಧ್ಯವಾಗುತ್ತದೆ ಎಂದರು.
ಸಂಜೀವಿನಿ ಒಕ್ಕೂಟದ ತಾಲೂಕು ಘಟಕದ ಕವಿತಾ ಮಾತನಾಡಿ, ದೌರ್ಜನ್ಯದ ವಿರುದ್ಧ ಮಹಿಳಾ ಸಮುದಾಯ ಧ್ವನಿ ಎತ್ತಬೇಕು. ಲಿಂಗ ತಾರತಮ್ಯ ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಮುಖ್ಯಗುರು ಮಲ್ಲಿಕಾರ್ಜುನ ಮಾತನಾಡಿದರು. ಅನೀಲಕುಮಾರ ಹಾಲಕುಡೆ, ಶಕುಂತಲಾ ಮುತ್ತಂಗೆ, ಅರ್ಚನಾ ಹಾಲಕುಡೆ, ರಂಜನಾ, ಶಿಲ್ಪಾ, ಶಿವಲೀಲಾ, ಅಂಜಲಿ ಕಲ್ಯಾಣೆ, ನಾಗಮ್ಮ ಜ್ಯಾಜೆ, ಲಕ್ಷ್ಮೀಬಾಯಿ, ವಿಜಯಲಕ್ಷ್ಮೀ, ಸಪ್ನಾ ದಾನಾ, ಪ್ರಭಾವತಿ ಚೂಡೆ, ಸರೋಜನಾ ಇತರರಿದ್ದರು.