ಬಸವಕಲ್ಯಾಣ: ಭಾರತೀಯ ಬೌದ್ಧ ಮಹಾಸಭಾ ತಾಲೂಕು ಶಾಖೆಯಿಂದ ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಡಿ.16ರಂದು ಆಯೋಜಿಸಿರುವ ವರ್ಷವಾಸ ಸಮಾರೋಪ ಮತ್ತು ಬೌದ್ಧ ಧಮ್ಮ ಸಮ್ಮೇಳನದ ಪ್ರಚಾರ ಶುರುವಾಗಿದೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಪ್ರಚಾರ ವಾಹನಗಳಿಗೆ ಜಿಲ್ಲಾ ಪರಿಶಿಷ್ಟ ಪಂಗಡ ಅಧಿಕಾರಿ ಪ್ರೇಮಸಾಗರ ದಾಂಡೇಕರ್ ಚಾಲನೆ ನೀಡಿದರು.
ತಹಸೀಲ್ದಾರ್ ಶಿವಾನಂದ ಮೇತ್ರೆ, ಪೌರಾಯುಕ್ತ ಮನೋಜಕುಮಾರ ಕಾಂಬ್ಳೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹಾದೇವ ಬಾಬಳಗಿ, ಸಮಾಜ ಕಲ್ಯಾಣ ಇಲಾಖೆ ಎಡಿ ದಿಲೀಪಕುಮಾರ, ಪಿಎಸ್ಐ ಅಂಬರೀಶ್ ವಾಗ್ಮೋಡೆ, ಆಸ್ಪತ್ರೆ ಆಡಳಿತಾಧಿಕಾರಿ ವಿನೋದ ಪಿ., ಬಿಎಸ್ಐ ತಾಲೂಕು ಅಧ್ಯಕ್ಷ ನಾಗನಾಥರಾವ ವಾಡೇಕರ್, ಮೀಲಿಂದ ಗುರೂಜಿ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸಂಜು ಕಾಳೇಕರ್, ಸಂಯೋಜಕ ಮನೋಹರ ಮೈಸೆ, ಉಪಾಧ್ಯಕ್ಷ ಭೀಮಶಾ ಫುಲೆ, ಕಾರ್ಯದರ್ಶಿ ಸಂಜೀವ ಗಾಯಕವಾಡ, ಸಹ ಕಾರ್ಯದರ್ಶಿ ಪವನ್ ಗಾಯಕವಾಡ, ಖಜಾಂಚಿ ವಿಠ್ಠಲರಾವ ಗೋಖಲೆ, ಪ್ರಮುಖರಾದ ಮನೋಹರ ಮೋರೆ, ಶಂಕರ ದಾಂಡಗೆ, ವಿಜಯಕುಮಾರ ಡಾಂಗೆ, ಪಿಂಟು ಕಾಂಬ್ಳೆ, ಲಲಿತಾ ಸಿಂಧೆ, ವೈಶಾಲಿ ಮೋರೆ, ಗೌತಮ ನಿರಗುಡಿ, ಮಹಾದೇವ ಕಾದೇಪುರ ಇತರರಿದ್ದರು.