ಬಸವಕಲ್ಯಾಣ: ಬಜರಂಗ ದಳ ಹಾಗೂ ಯುವ ಬ್ರಿಗೇಡ್ ನಿಂದ ಕಣ ಕಣದಲ್ಲಿ ಶಿವ ಎಂಬ ವಿನೂತನ ಕಾರ್ಯಕ್ರಮ ನಗರದಲ್ಲಿ ಭಾನುವಾರ ಜರುಗಿತು. ದೇವಸ್ಥಾನ ಹಾಗೂ ಮನೆಗಳಲ್ಲಿದ್ದ ದೇವರ ಹಳೆಯ ಫೋಟೋಗಳ ವಿಲೇವಾರಿ ಮಾಡಲಾಯಿತು.
ಸದ್ಗುರು ಸದಾನಂದ ಮಠ, ಬಿರಾದಾರ ಕಾಲನಿ, ಹನುಮಾನ ಮಂದಿರ, ಸೀತಾ ಬಡಾವಣೆ, ಹನುಮಾನ ಮಂದಿರ ಸೇರಿ ವಿವಿಧ ದೇವಸ್ಥಾನಗಳಲ್ಲಿ ಇರಿಸಿದ ದೇವರ ಹಳೆಯ ಫೋಟೋಗಳನ್ನು ಸಂಗ್ರಹಿಸಿ ಭೂಮಿಯ ಮಡಿಲಲ್ಲಿ ಇರಿಸಿ ಅದರ ಮೇಲೆ ಸಸಿ ನೆಡಲಾಯಿತು.
ಬಜರಂಗ ದಳ ತಾಲೂಕು ಸಂಯೋಜಕ ರವಿ ನಾವದಗೇಕರ್, ಸಹ ಸಂಯೋಜಕ ಸಚಿನ್ ಗರುಡಕರ್, ಬ್ರಿಗೇಡ್ ತಾಲೂಕು ಸಂಚಾಲಕ ವೆಂಕಟೇಶ ರಾಜೋಳೆ, ಅನ್ಮೋಲ್ ಪಸರಗೆ, ವಿನೋದ ಬಡಗೇರೆ, ರವಿ ಜಾಧವ್, ಸಂಜು ದಳವೆ ಇತರರಿದ್ದರು.