ಬಸವಕಲ್ಯಾಣ: ದ್ವೇಷ ಭಾವ ಅಳಸಿ ಪ್ರತಿಯೊಬ್ಬರಲ್ಲಿ ಪ್ರೀತಿ-ವಿಶ್ವಾಸ ಮೂಡಿಸಿ ಜೀವನ ಸಾಗಿಸುವುದು ಅವಶ್ಯಕವಾಗಿದೆ ಎಂದು ಕಲಬುರಗಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷ ಡಾ.ರಾಬಟ್೯ ಮೈಕಲ್ ಮಿರಾಂಡ್ ಹೇಳಿದರು.
ಪರ್ತಾಪುರ ರಸ್ತೆ ಬದಿಯ ಸತ್ಯಾನುಭವ ಕೇಂದ್ರದಲ್ಲಿ ಆಯೋಜಿಸಿದ್ದ ಕ್ರಿಸ್ಮಸ್ ಮತ್ತು ಅಂತರ್ ಧರ್ಮೀಯರ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆ ಬರುವುದು ಹಬ್ಬದ ಉದ್ದೇಶ. ದುಶ್ಚಟಗಳಿಂದ ಮುಕ್ತರಾಗಿ ಶಾರೀರಿಕ, ಮಾನಸಿಕವಾಗಿ ಸದೃಢರಾಗಿ ಸುಂದರ ಬದುಕು ಮತ್ತು ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಮಿಲಿಂದ ಗುರೂಜಿ ಮಾತನಾಡಿ, ಸೌಹಾರ್ದ ಮನೋಭಾವದಿಂದ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಎಲ್ಲ ಧರ್ಮದಲ್ಲಿಯೂ ಸೌಹಾರ್ದ ಮನೋಭಾವ ಮೂಡಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿ, ಎಲ್ಲರೂ ಪರಸ್ಪರ ವಿಶ್ವಾಸದಿಂದ ಬದುಕಿದಾಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ರಾಜಯೋಗಿನಿ ಬಿಕೆ ಸರಸ್ವತಿ ಬಹೆನ್ಜಿ, ಮುಖಂಡರಾದ ಮಾಲಾ ಬಿ.ನಾರಾಯಣರಾವ, ವಿಜಯಕುಮಾರ ಮಂಠಾಳೆ, ನರಸಿಂಗರಡ್ಡಿ ಗದಲೇಗಾಂವ ಮಾತನಾಡಿದರು.
ಫಾದರ್ ಆರೋಗ್ಯದಾಸ ಹುಲಸೂರು, ಫಾದರ್ ಮಾಕ್೯ ಮುಚಳಂಬ, ಸಿಸ್ಟರ್ ಮರಿಯಾ, ಸಿಸ್ಟರ್ ಬೆಟ್ಟಿ, ಸ್ವಾಮಿ ಜಾಜ್೯ ಲೋಬೊ, ಪ್ರಮುಖರಾದ ಯುವರಾಜ ಭೆಂಡೆ, ಚಂದ್ರಕಾಂತ ಮೇತ್ರೆ, ರಾಜನ್ ಚೌದರ್, ಶರಣಯ್ಯ ಸ್ವಾಮಿ, ಗುರುನಾಥ ದುರ್ಗೆ, ಲೋಕೇಶ ಕನಕ, ಬಸವರಾಜ ಘಾಳೆ, ಖಾಸೀಂ ಬೇಗ್ ಇತರರಿದ್ದರು. ಮುಖಂಡ ಅರ್ಜುನ ಕನಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಫಾದರ್ ಕ್ಷೇರಿ ಡಿಸೋಜಾ ನಿರೂಪಣೆ ಮಾಡಿದರು. ಫಾ.ಜಾಜ್೯ ಕೌಡಿಯಾಳ ವಂದಿಸಿದರು.