ಜಿಲ್ಲೆ

ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಶಾಂತಲಿಂಗ ಶಿವಯೋಗಿ ದೇವಸ್ಥಾನ ಕಮಿಟಿಯಿಂದ ಪ್ರಸಕ್ತ ಸಾಲಿನ ಸಾಮಾನ್ಯ ಯೋಜನೆಯಡಿ ಫತ್ತೇಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು.
ಹಿರಿಯ ಕಲಾವಿದ ವಿಶ್ವನಾಥ ಗುಣಶೆಟ್ಟಿ ಮತ್ತು ಸಂಗಡಿಗರು ಜಾನಪದ ಗೀತೆ ಗಾಯನ ಮಾಡಿದರು. ವಿಜಯಕುಮಾರ ಗಾದಗಿ ತಬಲಾ ಸಾಥ್ ನೀಡಿದರು. ಮುಖಂಡ ನರಸಿಂಗರಾವ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಕಮಿಟಿ ಅಧ್ಯಕ್ಷ ಶಿವರಾಜ ಪಾಟೀಲ್, ಶಿವಬಸಪ್ಪ ಪಾಟೀಲ್ ಇತರರಿದ್ದರು.