ಜಿಲ್ಲೆ

ವಿಜ್ಞಾನ ಮೇಳ 8ರಂದು

ರೇವಣಸಿದ್ದಪ್ಪ ಪಾಟೀಲ್

ಕಮಲನಗರ: ಆರರಿಂದ 10ನೇ ತರಗತಿ ವಿಜ್ಞಾನ ವಿಷಯದ ವಿದ್ಯಾರ್ಥಿಗಳ ಪ್ರಯೋಗ ಮಾದರಿ ಪ್ರದರ್ಶನಕ್ಕಾಗಿ ವಿಜ್ಞಾನ ಮೇಳ ಕಾರ್ಯಕ್ರಮ ಡಿ.8ರಂದು ಇಲ್ಲಿನ ಗುರಪ್ಪ ಟೊಣ್ಣೆ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಮುಖ್ಯಸ್ಥ ಬಾಬುರಾವ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಷನ್ ಮತ್ತು ವಿಜ್ಞಾನ ಕೇಂದ್ರಗಳ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಿನ ಮುಖ್ಯಗುರುಗಳ ಸಭೆಯಲ್ಲಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ವಲಯ ಸಂಪನ್ಮೂಲ ವ್ಯಕ್ತಿ ನಾಗೇಶ ಸಂಗಮೆ, ಮುಖ್ಯಗುರುಗಳಾದ ಶ್ರೀನಿವಾಸ ಮಂಠಾಳಕರ್, ಮಹ್ಮದ್ ಶೇಖ, ಸಂತೋಷ ಬಿರಾದಾರ್, ಮನೋಜ ಹಿರೇಮಠ, ದಿಲೀಪ, ಮಡೋಳಪ್ಪ ಮಹಾಜನ, ಪ್ರಕಾಶ ಹಿಪ್ಪಳಗಾಂವೆ, ಶಿವರಾಜ ಜಲಸಂಗೆ, ಚನ್ನಬಸವ ಘಾಳೆ, ಸುಭಾಷ ಬಿರಾದಾರ್ ಇತರರಿದ್ದರು.