???????????? 
ಜಿಲ್ಲೆ

ಗೊಂಡ ಭವನ ಮಂಜೂರಿಗೆ ಪ್ರಯತ್ನ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ತಾಲೂಕು ಮಟ್ಟದಲ್ಲಿ ಕುರುಬ (ಗೊಂಡ) ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಿ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಮತ್ತು ಗೊಂಡ ಸಮಾಜದ ಮುಖಂಡರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿರುವವರನ್ನು ಗುರುತಿಸಿ ಸೌಲಭ್ಯ ಸಿಗುವಂತೆ ಮಾಡುವೆ. ನಾನು ಸಮಾಜ ಸೇವೆ ಮಾಡುವ ಉದ್ದೇಶದಿಂದ ನಗರದಲ್ಲಿ ಜನಸಂಪರ್ಕ ಕಚೇರಿ ಸ್ಥಾಪಿಸಿದ್ದೇನೆ. ಬಡ, ಹಿಂದುಳಿದ, ಕೂಲಿ ಕಾರ್ಮಿಕರ ಏಳಿಗೆ ನನ್ನ ಧ್ಯೇಯ. ಗೊಂಡ ಜಾತಿ ಪ್ರಮಾಣಪತ್ರ ಸಿಗದಂಥವರಿಗೆ ಕೊಡಿಸಲು ಅಧಿಕಾರಿಗಳಿಗೆ ಮನವರಿಕೆ ಮಾಡುವೆ ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅರ್ಜುನ ಕನಕ, ಮುಖಂಡರಾದ ಬಂಡೆಪ್ಪ ಮೇತ್ರೆ, ಮಾರುತಿ ಸೂರ್ಯವಂಶಿ, ಚಂದ್ರಕಾಂತ ಮೇತ್ರೆ, ರವಿ ನಾಗಿನಕೇರೆ, ತುಕಾರಾಮ ಮಲ್ಲಪ್ಪ ಮಾತನಾಡಿದರು. ವೈಜಿನಾಥ ಪೂಜಾರಿ, ಸತೀಶ ಪಾಟೀಲ್, ಸಂಬಣ್ಣ ಗೌಡೆ, ಮಹಾದೇವ ಪೂಜಾರಿ, ಸುಭಾಷ ರೇಕುಳಗೆ, ಶಿವಪ್ಪ ಗೌರ, ಲಕ್ಷ್ಮಣ ಗುಂಜಟೆ, ಗೋವಿಂದ ಮೋರಖಂಡಿ, ಸುಭಾಷ ತಳಭೋಗ, ನವನಾಥ ಮೇತ್ರೆ, ರಾಜಪ್ಪ ಮಂಠಾಳ, ಪ್ರಭು ಇತರರಿದ್ದರು.