ಜಿಲ್ಲೆ

ಬೀದರ್ ಜಿಲ್ಲೆಗೆ 14 ಚಿನ್ನದ ಪದಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಚಿತ್ರನಟ ದಿ. ಪುನೀತ್ ರಾಜಕುಮಾರ್ ಸ್ಮರಣಾರ್ಥ ರಾಯಚೂರು ಜಿಲ್ಲೆಯ ಸಿಂಧನೂರಿನ ಸತ್ಯಗಾರ್ಡ್ ಫಂಕ್ಷನ್ ಹಾಲ್‍ನಲ್ಲಿ ನಡೆದ ದ್ವಿತೀಯ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೀದರ್ ಜಿಲ್ಲೆಯ 14 ಕ್ರೀಡಾಪಟುಗಳು ಚಿನ್ನ, ಒಬ್ಬರು ಬೆಳ್ಳಿ ಹಾಗೂ ಇಬ್ಬರು ಕಂಚಿನ ಪದಕ ಜಯಿಸಿ ಸಾಧನೆಗೈದಿದ್ದಾರೆ.
ಗ್ರುಪ್ ಮತ್ತು ಸಿಂಗಲ್ ಕಟಾದಲ್ಲಿ ಸುದೇಶ ಮೋರೆ, ನಿಶೀತ್ ಆರ್. ಸಾವಳಗಿ, ಮಹಮ್ಮದ್ ಮಹೆಬೂಬ್ ತಾಳಿಕೋಟೆ, ಸುಹೀತ್ ಎಸ್. ಮಾಳಗೆ, ಅನುರಾಗ್ ಪಿ, ಆರವ್ ಪಿ, ಉಜೇರ್, ಪ್ರಣಿತಿ, ನಿರ್ಮಲಾ, ಮಮತಾ, ಭಾಗ್ಯಶ್ರೀ, ಭಗವಾನ ಪ್ರಸಾದ್ ಮೋರೆ, ನಾಗೇಶ ಎಸ್, ಕುಮಿತೆ (ಫೈಟ್)ನಲ್ಲಿ ನಂದಿನಿ ಎಸ್. ಮನ್ನಳ್ಳಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಕಟಾದಲ್ಲಿ ಯೋಗೇಶ್ವರಿ ಸ್ವಾಮಿ ಬೆಳ್ಳಿ, ಶಾಮ ಹಾಗೂ ದಿನಕರ್ ಎಸ್. ಚಿಟ್ಟಾ ಕಂಚಿನ ಪದಕ ಗೆದ್ದಿದ್ದಾರೆ.
ಸ್ಪರ್ಧೆಯಲ್ಲಿ ಭಾರತ, ಶ್ರೀಲಂಕಾ, ನೇಪಾಳ್ ದೇಶದ ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾರತದ ಕ್ರೀಡಾಪಟುಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಕ್ರೀಡಾಪಟುಗಳು ಇದ್ದರು ಎಂದು ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸೂರ್ಯಕಾಂತ ಮೋರೆ ತಿಳಿಸಿದ್ದಾರೆ.
ಬೀದರ್ ಕ್ರೀಡಾಪಟುಗಳು 17 ಪದಕಗಳನ್ನು ಜಯಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದ್ದಾರೆ.