ಜಿಲ್ಲೆ

ನಿರುದ್ಯೋಗಿಗಳಿಗೆ ಉಚಿತ ತರಬೇತಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಸಿದ್ಧೇಶ್ವರ ಟ್ರಸ್ಟ್ ಶಾಲೆ ಬಿಟ್ಟ 15 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಹಾಗೂ ನಿರುದ್ಯೋಗಿಗಳಿಗೆ ಒಂದು ವರ್ಷದ ವಸತಿ ಸಹಿತ ವಿವಿಧ ಉಚಿತ ಕೌಶಲ ತರಬೇತಿ ನೀಡಲು ನಿರ್ಧರಿಸಿದೆ.
ಮೆಡಿಕಲ್ ರಿಪ್ರೆಸೆಂಟೆಟಿವ್, ಪ್ಯಾರಾ ಮೆಡಿಕಲ್, ಫಿಸಿಯೊ ಥೆರಪಿಸ್ಟ್, ಲ್ಯಾಬ್, ರೆಡಿಯೊಲಾಜಿ, ಎಕ್ಸ್‍ರೆ ಅಸಿಸ್ಟಂಟ್, ಬೆಸಿಕ್ ಕಂಪ್ಯೂಟರ್, ಮೊಬೈಲ್, ಎಸಿ, ಫ್ರಿಡ್ಜ್ ದುರಸ್ತಿ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಬೈಕ್, ಕಾರ್ ಮೆಕ್ಯಾನಿಕ್, ವೆಲ್ಡರ್, ಕಸೂತಿ, ಫೊಟೊಗ್ರಾಫಿ, ಸಂಗೀತ, ನೃತ್ಯ, ಕಾರ್ಪೆಂಟರ್, ಹೊಲಿಗೆ, ಟಿಫಿನ್ ಸೆಂಟರ್, ಫುಡ್ ಪ್ರೊಸೆಸ್, ಪಾನಿ ಪುರಿ, ಜ್ಯೂಸ್, ಇಡ್ಲಿ-ವಡೆ ತಯಾರಿಕೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ ತಿಳಿಸಿದ್ದಾರೆ.
ನಿರುದ್ಯೋಗಿಗಳಿಗೆ ಉತ್ತಮ ಬದುಕು ಕಟ್ಟಿಕೊಡಲು ಅವರ ಆಸಕ್ತಿಯ ವಿವಿಧ ತರಬೇತಿಗಳನ್ನು ನೀಡಲು ಉದ್ದೇಶಿಸಲಾಗಿದೆ. ತರಬೇತಿ ಅವಧಿ ಮುಗಿದ ನಂತರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲು ಸಹ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
15 ವರ್ಷದಿಂದ 21 ವರ್ಷದ ಒಳಗಿನ ಅಭ್ಯರ್ಥಿಗಳು ತರಬೇತಿಗೆ ನಂದಿ ಕಾಲೊನಿಯಲ್ಲಿ ಇರುವ ಟ್ರಸ್ಟ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9448400365ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.