ಬೀದರ್: ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳದ ಜಿಲ್ಲಾ ಯುವ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಸವ ದಳದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಣೇಶ ಬಿರಾದಾರ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಸಂಜುಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿ ಓಂಕಾರ ಪಸರ್ಗೆ, ಸಹ ಕಾರ್ಯದರ್ಶಿ ಆನಂದ ಪಾಟೀಲ, ಸಂಘಟನಾ ಕಾರ್ಯದರ್ಶಿ ನಂದಕುಮಾರ ಪಾಟೀಲ, ಪ್ರಮುಖರಾದ ಪ್ರವೀಣ ಪಾಟೋದಿ, ಶಾಂತಕುಮಾರ ವಲ್ಲೇಪುರೆ, ಮಹಾಂತೇಶ ಕೋಟೆ, ಉದಯಕುಮಾರ ಚಟ್ನಳ್ಳಿ, ಜಗನ್ನಾಥ ಸ್ವಾಮಿ, ಶಿವು ಕೋರೆ, ಅರವಿಂದ ಧುಮ್ಮನಸೂರ ಮೊದಲಾದವರು ಪಾಲ್ಗೊಂಡಿದ್ದರು.