ಜಿಲ್ಲೆ

ವರಂಗಲ್ ವೀಕ್ಷಕರಾಗಿ ಸಂಜಯ್ ಜಾಗೀರದಾರ್

ರೇವಣಸಿದ್ದಪ್ಪ ಪಾಟೀಲ್

ಬೀದರ್: ನೆರೆಯ ತೆಲಂಗಾಣದ ವರಂಗಲ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಸಂಜಯ್ ಜಾಗೀರದಾರ್ ಅವರನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ತೆಲಂಗಾಣ ಉಸ್ತುವಾರಿ ಮಾಣಿಕರಾವ್ ಠಾಕರೆ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಜಯ್ ಜಾಗೀರದಾರ್ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದಾರೆ. ಎನ್‍ಎಸ್‍ಯುಐ, ಕಾಂಗ್ರೆಸ್ ಯುವ ಘಟಕದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಅವರಿಗೆ ವರಂಗಲ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ವೀಕ್ಷಕ ಹೊಣೆ ಕೊಡಲಾಗಿದೆ.