ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಮಲ್ಲಿನಾಥ ಆಯುರ್ವೇದ ಫಾರ್ಮಸಿಯಲ್ಲಿ ಅಕ್ಟೋಬರ್ 26 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಶತಾಯು ಆಯುರ್ವೇದ ಕೇಂದ್ರದ ಡಾ. ಮೃತ್ಯುಂಜಯ ಸ್ವಾಮಿ, ಡಾ. ಅನಿತಾ ಸ್ವಾಮಿ, ಶುಭ್ರ ಆರೋಗ್ಯ ಧಾಮದ ಡಾ. ನಂಜುಂಡಯ್ಯ ಸ್ವಾಮಿ, ಡಾ. ಪ್ರಭಾ ಸ್ವಾಮಿ ಹಾಗೂ ಮಲ್ಲಿನಾಥ ಆಯುರ್ವೇದ ಫಾರ್ಮಸಿಯ ಡಾ. ತ್ರಿಪುರಾಂತ ಸ್ವಾಮಿ ಶಿಬಿರ ನಡೆಸಿಕೊಡಲಿದ್ದಾರೆ. ರೋಗಿಗಳಿಗೆ ಉಚಿತ ಹೊಮಿಯೋಪತಿ ಔಷಧ ವಿತರಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9620201901 ಅಥವಾ 8884541901ಗೆ ಸಂಪರ್ಕಿಸಬಹುದು. ಜಿಲ್ಲೆಯ ರೋಗಿಗಳು ಶಿಬಿರದ ಲಾಭ ಪಡೆಯಬೇಕು ಎಂದು ಶುಭ್ರ ಆರೋಗ್ಯ ಧಾಮದ ಮುಖ್ಯಸ್ಥರು ಮನವಿ ಮಾಡಿದ್ದಾರೆ.