ಜಿಲ್ಲೆ

ಫೆಡರೇಷನ್ ಅಧ್ಯಕ್ಷರಾಗಿ ಶಿವಶರಣಪ್ಪ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಲೈಫ್ ಇನ್ಸುರೆನ್ಸ್ ಏಜೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ(ಎಲ್‍ಐಎಎಫ್‍ಐ)ದ ಬೀದರ್ ಶಾಖೆಯ ನೂತನ ಅಧ್ಯಕ್ಷರಾಗಿ ಶಿವಶರಣಪ್ಪ ಹಣಮಶೆಟ್ಟೆ ಸೋನಾಳ ಆಯ್ಕೆಯಾಗಿದ್ದಾರೆ.
ನಗರದ ಶಿವನಗರದ ನಾಗೇಂದ್ರ ನಿಟ್ಟೂರೆ ಕಾಂಪ್ಲೆಕ್ಸ್‍ನಲ್ಲಿ ನಡೆದ ಫೆಡರೇಷನ್ ಸಾಮಾನ್ಯ ಸಭೆಯಲ್ಲಿ ಬೀದರ್ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ರೇವಣಸಿದ್ದಪ್ಪ ಬುಳ್ಳಾ (ಕಾರ್ಯದರ್ಶಿ) ಮತ್ತು ಗಣಪತಿ ರಾಜೇಶ್ವರ (ಖಜಾಂಚಿ).
ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಫೆಡರೇಷನ್ ವಲಯ ಕಾರ್ಯದರ್ಶಿ ಮಲ್ಲಿಕಾರ್ಜುನ ಕಂದಕೂರ ಅವರು, ಫೆಡರೇಷನ್ ನಿಗಮದ ಏಜೆಂಟರ ಹಾಗೂ ಪಾಲಿಸಿದಾರರ ಹಿತ ರಕ್ಷಣೆಗೆ ನಿರಂತರ ಶ್ರಮಿಸುತ್ತ ಬಂದಿದೆ. ಬರುವ ದಿನಗಳಲ್ಲಿಯೂ ಏಜೆಂಟರ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಫೆಡರೇಷನ್ ವಿಭಾಗೀಯ ಅಧ್ಯಕ್ಷ ರಾಜಶೇಖರ ಲಾಡಿ ಅವರು, ಬೀದರ್ ಶಾಖೆಯಿಂದ ಉತ್ತಮ ಕಾರ್ಯಗಳು ಆಗಲಿ ಎಂದು ಶುಭ ಹಾರೈಸಿದರು.
ವಿಭಾಗೀಯ ಕಾರ್ಯದರ್ಶಿ ಮಲ್ಕಜಯ್ಯ, ಗಂಗಾವತಿ ಶಾಖೆಯ ರಾಮ ಬಾಬು, ಉಮೇಶ ಪವಾರ್ ಮತ್ತಿತರರು ಇದ್ದರು.