ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಅಮರಕುಮಾರ ಖಂಡ್ರೆ ಇತರರು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.
ನಿರ್ದೇಶಕರಾದ ರೇವಣಸಿದ್ದಪ್ಪ ಪಾಟೀಲ್, ಬಸವರಾಜ ಚಟ್ನಳ್ಳಿ, ಬಸವರಾಜ ಕಾಮಶೆಟ್ಟಿ, ಭೀಮರಡ್ಡಿ, ಸಿದ್ದಾಜಿ ಬಿರಾದಾರ್, ಅಶೋಕರಾವ ಸೋನಜಿ, ಪ್ರಮುಖರಾದ ಹಣಮಂತರಾವ ಚವ್ಹಾಣ್, ರಮೇಶ ಚಿದ್ರಿ, ದೀಪಕ ಮನ್ನಳ್ಳಿ, ಗಣೇಶ ಪಾಟೀಲ್ ಇದ್ದರು. ಅ.18ರಂದು ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿದೆ.