ಜಿಲ್ಲೆ

ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್‍ಗೆ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ಕಲಬುರಗಿ ವಿಭಾಗ ಹಾಗೂ ಬೀದರ್ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ತಿಳಿಸಿದ್ದಾರೆ.
ಕಲಬುರಗಿ ವಿಭಾಗ ಘಟಕ: ಜೇಸನ್ ಮೋಡಿ, ಜಾಕೋಬ್ ಮುಸ್ತಾಪುರಕರ್ (ಕಾರ್ಯಾಧ್ಯಕ್ಷರು), ಜಗನ್ನಾಥ ಕೌಠಾ, ಸಬಸ್ಟಿನ್ ಚಿದ್ರಿ, ಅಬ್ರಾಹಂ ಮೇತ್ರೆ (ಉಪಾಧ್ಯಕ್ಷರು), ಜೊನ್ಸ್ ಮನೋಹರ, ಪ್ರಶಾಂತ ಗುತ್ತೆದಾರ್, ವಿಜಯಕುಮಾರ ಶಹಾಪುರಕರ್ (ಪ್ರಧಾನ ಕಾರ್ಯದರ್ಶಿಗಳು), ಜಗನ್ನಾಥ ನವಲಸಪುರ, ರಾಬರ್ಟ್ ನೌಬಾದ್ ಹಾಗೂ ರಾಜಕುಮಾರ ಹುಪಳಾ (ಕಾರ್ಯದರ್ಶಿಗಳು).
ಬೀದರ್ ಜಿಲ್ಲಾ ಘಟಕ: ಭಾಸ್ಕರ್ ನಾಗಪ್ಪ ಕಾಶೆಂಪುರ(ಅಧ್ಯಕ್ಷ).
ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ದಾಸ್ ಚಿದ್ರಿ ಅವರ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದೆ. ನೂತನ ಪದಾಧಿಕಾರಿಗಳು ಕ್ರಿಶ್ಚಿಯನ್ ಸಮುದಾಯದ ಹಿತರಕ್ಷಣೆ ಹಾಗೂ ಅಸೋಸಿಯೇಷನ್ ಬಲವರ್ಧನೆಗೆ ಶ್ರಮಿಸಬೇಕು ಎಂದು ಜಾಗೀರದಾರ್ ಸೂಚಿಸಿದ್ದಾರೆ.