ಜಿಲ್ಲೆ

ಲೋಕಾಯುಕ್ತ ಬಲೆಗೆ ಎಸ್ ಡಿಎ

ರೇವಣಸಿದ್ದಪ್ಪ ಪಾಟೀಲ್

ಬೀದರ್: ವೇತನ ಮತ್ತು ಪ್ರಯಾಣ ಭತ್ಯೆಗೆ ಸಂಬಂಧಿಸಿದ ಬಿಲ್ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟ ಹುಮನಾಬಾದ್ ತಾಲೂಕಿನ ಹುಡಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎಸ್.ಡಿಎ ಸುನೀಲ ಕಾಜಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಶುಕ್ರವಾರ ಸಿಕ್ಕಿಬಿದ್ದಿದ್ದಾರೆ.
ಹುಡಗಿ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸರಡ್ಡಿ ವೀರಾರಡ್ಡಿ ಅವರ ಸೆಪ್ಟೆಂಬರ್ ವೇತನ ಮತ್ತು ಬಾಕಿ ಇರುವ ಹತ್ತು ತಿಂಗಳ ಪ್ರಯಾಣ ಭತ್ಯೆ ಬಿಲ್ ಮಾಡಿಕೊಡಲು ಕಾಜಿ 20 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಶ್ರೀನಿವಾಸರಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮುಂಗಡ 10 ಸಾವಿರ ಪಡೆದು ಬಾಕಿ ಉಳಿದ 10 ಸಾವಿರ ರೂ. ಶುಕ್ರವಾರ ನಗರದಲ್ಲಿ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ. ಓಲೇಕಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿ ಜೈಲಿಗೆ ಕಳುಹಿಸಿದೆ.
ತನಿಖಾಧಿಕಾರಿಯಾದ ವಾಹೇದ್ ಹುಸೇನ್ ಕೋತ್ವಾಲ್, ಸಂತೋಷ ರಾಠೋಡ್, ಪ್ರದೀಪ ಕೊಳ್ಳಾ, ಸಿಬ್ಬಂದಿ ವಿಷ್ಣುರಡ್ಡಿ, ಕುಶಾಲ, ಕಿಶೋರ, ಅಡೆಪ್ಪ, ಶುಕ್ಲೋಧನ, ಭರತ, ಸರಸ್ವತಿ, ನಾಗಶೆಟ್ಟಿ, ಜಗದೀಶ್, ಹಾತಿಸಿಂಗ್, ರಮೇಶ ಕಾಯರ್ಾಚರಣೆ ತಂಡದಲ್ಲಿದ್ದರು.