ಬೀದರ್: ಕಾನೂನು ಅರಿವು ಎಲ್ಲರಿಗೂ ಅವಶ್ಯಕ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹೇಳಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಹುಮನಾಬಾದ್‍ನ ಬಳವಂತರಾವ್ ವರಾಳೆ ಶಿಕ್ಷಣ ಸಂಸ್ಥೆ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ ಎಂದು ನುಡಿದರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಬಳವಂತರಾವ್ ವರಾಳೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರ್ಷಾ ಬಿ. ರತ್ನಾಕರ್, ಕಾರ್ಯದರ್ಶಿ ಅತುಲ್ ಬಿ. ರತ್ನಾಕರ್, ಹಳ್ಳಿಖೇಡ(ಬಿ) ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಗಣಪತರಾವ್ ನಾಯಿಕೋಡೆ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರಕಾಶ ಕಲ್ಯಾಣಿ, ಬೀದರ್ ಕಾಲೇಜು ಪ್ರಾಚಾರ್ಯ ಈರಣ್ಣ ಲೋಣಿ, ಮುಖ್ಯಶಿಕ್ಷಕ ಗೋವಿಂದ ಪೂಜಾರಿ, ಕನಿಷ್ಕ ಮದ್ನಾನಕರ್, ಗಂಗಶೆಟ್ಟಿ ಖಾನಾಪುರೆ, ಸೂರ್ಯಕಾಂತ ಸಿಂಗಾರೆ, ಮನೋಜಕುಮಾರ ಇದ್ದರು.
ಉದ್ಘಾಟನೆ: ಹಳ್ಳಿಖೇಡ(ಬಿ) ಪಟ್ಟಣದ ಬಳವಂತರಾವ್ ಶಿಕ್ಷಣ ಸಂಸ್ಥೆ ಸಂಚಾಲಿತ ಡಾ. ಬಿ.ಆರ್. ಅಂಬೇಡ್ಕರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ಅವರ ಪತ್ನಿ ಗೀತಾ ಅವರು ಡಾ. ಅಂಬೇಡ್ಕರ್ ಸ್ಮರಣಾರ್ಥ ಗ್ರಂಥಾಲಯ ಉದ್ಘಾಟಿಸಿದರು.