ಬೀದರ್: ನೀಟ್, ಕೆಸಿಇಟಿ, ಜೆಇಇ ಪರೀಕ್ಷೆಗಳಲ್ಲಿ ಸಾಧನೆಗೈದು ವಿವಿಧ ಕೋರ್ಸ್‍ಗಳಲ್ಲಿ ಪ್ರವೇಶ ಪಡೆದ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳನ್ನು ಇಲ್ಲಿಯ ಕಾಲೇಜಿನಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪಿಯುಸಿಯಲ್ಲಿ ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆದು, ನೀಟ್‍ನಲ್ಲಿ ಉತ್ತಮ ರ್ಯಾಂಕ್ ಗಳಿಸಿ ಸರ್ಕಾರಿ ಕೋಟಾದಡಿ ಯಾದಗಿರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಸೀಟು ಪಡೆದ ಸುದಿಕ್ಷಿತ್ ಸತೀಶ್ ಅವರಿಗೆ ಲಾಪ್‍ಟಾಪ್, ಸ್ಟೆಥಸ್ಕೋಪ್, ಸಮವಸ್ತ್ರ ನೀಡಿ, ಗೌರವಿಸಲಾಯಿತು.
ಜೆ.ಇ.ಇ.ಯಲ್ಲಿ ಸಾಧನೆಗೈದು ನಾಗಪುರದ ಎನ್‍ಐಟಿಯಲ್ಲಿ ಸ್ಥಾನ ಪಡೆದ ಅಭಿಜೀತ್ ರವಿ, ಔರಂಗಾಬಾದ್‍ನ ಎನ್‍ಐಟಿಯಲ್ಲಿ ಸೀಟು ಗಳಿಸಿದ ಚಾಮುಂಡೇಶ್ವರಿ ಮಲ್ಲಿಕಾರ್ಜುನ,
ಬಿ.ಎಸ್ಸಿ ಅಗ್ರಿಕಲ್ಚರ್‍ನಲ್ಲಿ ಸೀಟು ಗಳಿಸಿದ ಕೃಷ್ಣ ಅಂಬಾದಾಸ್, ತೋಟಗಾರಿಕೆ ಕೋರ್ಸ್‍ನಲ್ಲಿ ಸ್ಥಾನ ಪಡೆದ ನಾಗೇಶ ಮಲ್ಲಿಕಾರ್ಜುನ, ಫಾರ್ಮಸಿ ಕೋರ್ಸ್‍ನಲ್ಲಿ ಪ್ರವೇಶ ಪಡೆದ ಸೊಹೇಲ್, ಸುದೀಪ್, ಜೆ.ಇ.ಇ ಮೇನ್ಸ್‍ನಲ್ಲಿ ಅರ್ಹತೆ ಪಡೆದು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೀಟು ಗಳಿಸಿದ ವಿಶ್ವನಾಥ ಬಸವರಾಜ, ವಿಘ್ನೇಶ ಅಂಬರೀಷ್ ಹಾಗೂ ಟಾಪ್ 5 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ದ್ವಿತೀಯ ಪಿಯುಸಿ, ನೀಟ್, ಕೆಸಿಇಟಿ, ಜೆಇಇ ಪರೀಕ್ಷೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ವಿವಿಧ ಕೋರ್ಸ್‍ಗಳಲ್ಲಿ ಸ್ಥಾನ ಗಿಟ್ಟಿಸಿ ಗಮನ ಸೆಳೆದಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಡಿ. ತಾಂದಳೆ ಮಾತನಾಡಿದರು. ಖಜಾಂಚಿ ಗೋಪಾಲ್ ತಾಂದಳೆ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ಅನಿಲಕುಮಾರ ಜಾಧವ್ ನಿರೂಪಿಸಿದರು.