ಜಿಲ್ಲೆ

ರಾಷ್ಟ್ರಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಔರಂಗಾಬಾದ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಜಿಲ್ಲೆಯ ಕರಾಟೆ ಪಟು ಸುದೇಶ ಮೋರೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ನಗರದ ಜಿಲ್ಲಾ ಬಾಲಭವನದಲ್ಲಿ ಅವರನ್ನು ಜಿಲ್ಲಾ ಕ್ರೀಡಾ ಕರಾಟೆ ಸಂಸ್ಥೆಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ರಾಷ್ಟ್ರಮಟ್ಟದ ಚಾಂಪಿಯನ್‍ಶಿಪ್‍ನಲ್ಲಿ ಜಿಲ್ಲೆಯ 19 ಕ್ರೀಡಾಪಟುಗಳು ಭಾಗವಹಿಸಿದ್ದರು. ಸುದೇಶ ಮೋರೆ ಟೀಮ್ ಕಟಾದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಂಸ್ಥೆ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಸೂರ್ಯಕಾಂತ ಮೋರೆ, ಪ್ರಮುಖರಾದ ಮಹಮ್ಮದ್ ಮಹೆಬೂಬ್ ತಾಳಿಕೋಟೆ, ಸುವಿತ್ ಮೋರೆ, ಸಿದ್ಧಾರ್ಥ ಮೋರೆ, ನಂದಿನಿ, ದಿನಕರ ಮೊದಲಾದವರು ಇದ್ದರು.