ಜಿಲ್ಲೆ

ಜನ ಸಮೃದ್ಧಿ ಸಂಘ ರೂ. 19 ಲಕ್ಷ ಲಾಭ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೀದರ್ ಜನ ಸಮೃದ್ಧಿ ಸೌಹಾರ್ದ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ. 19.20 ಲಕ್ಷ ಲಾಭ ಗಳಿಸಿದೆ.
ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಂಘದ ಐದನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಈ ಮಾಹಿತಿ ನೀಡಿದರು. ಲಾಭದಲ್ಲಿ ಸದಸ್ಯರಿಗೆ ಶೇ 10 ರಷ್ಟು ಪಾಲು ಕೊಡಲಾಗುವುದು ಎಂದು ಪ್ರಕಟಿಸಿದರು. ಸಂಘ ಒಟ್ಟು ರೂ. 3.46 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಸಂಘ ವಿವಿಧ ಗ್ರಾಹಕ ಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಸದಸ್ಯರ ಹಿತರಕ್ಷಣೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಗಂದಗೆ ಅವರ ನಾಯಕತ್ವದಲ್ಲಿ ಸಂಘ ಅಲ್ಪಾವಧಿಯಲ್ಲೇ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದು ನುಡಿದರು.
ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಎಲ್ಲರ ಹಿತ ಅಡಗಿದೆ. ಸಹಕಾರದಿಂದಲೇ ಸಮಾಜದ ಪ್ರಗತಿ ಸಾಧ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಸಂಘದ ಉಪಾಧ್ಯಕ್ಷ ಶಿವಕುಮಾರ ಪಾಟೀಲ, ಪ್ರಮುಖರಾದ ಕುಶಾಲರಾವ್ ಪಾಟೀಲ ಖಾಜಾಪುರ, ರಾಮಶೆಟ್ಟಿ, ಸಂಜೀವಕುಮಾರ ಪಾಟೀಲ, ನಿರ್ದೇಶಕರಾದ ಸಂತೋಷಕುಮಾರ ಪಾಟೀಲ, ಸೂರ್ಯಕಾಂತ ಜಾಪುರೆ, ಬಸವರಾಜ ದುಕಾನದಾರ್, ರಾಜಕುಮಾರ ಸೋನಾಳೆ, ಅಶೋಕ ಗಂಧೆ, ಮಾಣಿಕಪ್ಪ ಕರ್ಪೂರ, ಶೈಲೇಂದ್ರಕುಮಾರ ಝರೆಪ್ಪ, ಪಾಂಡುರಂಗ ಪಂಚಾಳ, ದಿಲೀಪ್ ಸಜ್ಜನಶೆಟ್ಟಿ, ಕೀರ್ತಿ ಸೂರ್ಯಕಾಂತ ರಾಮಶೆಟ್ಟಿ, ರಾಣಿ ಸತ್ಯಮೂರ್ತಿ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಕುಮಾರ ಹಲಬರ್ಗಾ, ಡಾ. ಕಪಿಲ್ ಪಾಟೀಲ, ಚಂದ್ರಕಾಂತ ಕಾಡಾದಿ, ಸಂಗಮೇಶ ಆಣದೂರೆ ಇದ್ದರು. ಪೂಜಾ ವಾರ್ಷಿಕ ವರದಿ ಮಂಡಿಸಿದರು. ಸೂರ್ಯಕಾಂತ ರಾಮಶೆಟ್ಟಿ ನಿರೂಪಿಸಿದರು. ಮಾಣಿಕ ಕರ್ಪೂರ ವಂದಿಸಿದರು.