ಬೀದರ್: ಇಲ್ಲಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಒಟ್ಟು ರೂ. 7.75 ಲಕ್ಷ ನಿವ್ವಳ ಲಾಭ ಗಳಿಸಿದೆ.
ನಗರದ ದೇವಿ ಕಾಲೊನಿಯ ದೇವಿ ಮಂದಿರದಲ್ಲಿ ಇರುವ ರೇವಪಯ್ಯ ಕಲ್ಯಾಣ ಮಂಟಪದಲ್ಲಿ ನಡೆದ 27ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ರಮೇಶ ಮಠಪತಿ ಈ ಮಾಹಿತಿ ನೀಡಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ವೃದ್ಧಿಯಾಗಿದೆ. ಬರುವ ದಿನಗಳಲ್ಲಿ ವಿವಿಧ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ಇದೆ ಎಂದು ಹೇಳಿದರು.
ಸಂಘದಲ್ಲಿ ರೂ. 1.15 ಕೋಟಿ ಠೇವಣಿ ಇದೆ. ಸದಸ್ಯರಿಗೆ ರೂ. 1.81 ಕೋಟಿ ಸಾಲ ವಿತರಿಸಲಾಗಿದೆ. ರೂ. 2,49 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಕಾಶೀನಾಥ ಎಸ್. ಸೂರ್ಯವಂಶಿ, ನಿರ್ದೇಶಕರಾದ ಸಿದ್ದಯ್ಯ ಎಸ್. ಕವಡಿಮಠ, ಮಾಣಿಕಪ್ಪ ಗೋರನಾಳೆ, ಚನ್ನಬಸಯ್ಯ ಎಸ್. ಗಣಾಚಾರಿ, ಬಸವಂತರಾವ್ ಎಸ್. ಬಿರಾದಾರ, ಮಲ್ಲಿಕಾರ್ಜುನ ಎ. ಪಾಟೀಲ, ಚಂದ್ರಕಾಂತ ಮಿರ್ಚೆ, ಉದಯಕುಮಾರ ವಿ. ಲದ್ದೆ, ಓಂಕಾರ ಎಸ್. ಪಾಟೀಲ, ಸುನಂದಾ ಬಿ. ಶೇರಿಕಾರ್, ಶೀಲಾ ಎಸ್. ಬಿರಾದಾರ, ವ್ಯವಸ್ಥಾಪಕ ಜಗದೀಶ ಮೋಳಕೇರಿ ಇದ್ದರು.