ಜಿಲ್ಲೆ

ಉದ್ಯಮಿಗೆ ಸಾಧಕ ಪ್ರಶಸ್ತಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಯುವ ಉದ್ಯಮಿ ಲವನೀತ್ ಸಿಂಗ್ ಸರ್ದಾರ್ ಮನ್ ಪ್ರೀತ್ ಸಿಂಗ್ (ಬಂಟಿ)ಗೆ ಟೀಮ್ ಹೊಲೊಗ್ರಾಮ್ನಿಂದ ದಕ್ಷಿಣ ಭಾರತ ಪ್ರದೇಶಕ್ಕಾಗಿ ಬಿಐಟಿಎ ಕಿರಿಯ ಸಾಧಕ ಪ್ರಶಸ್ತಿ ಲಭಿಸಿದೆ.
ಅಜರ್ಬೈಜಾನ್ ದೇಶದ ರಾಜಧಾನಿ ಬಾಕುದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೀದರ್ ನಲ್ಲಿ ಆರಂಭಿಸಿರುವ ಎಸ್.ಆರ್.ಎಸ್ ರೆಸಾಟ್೯ ಮತ್ತು ಕನ್ವೆನ್ಶನ್ ಮೂಲಕ ಈ ಭಾಗದಲ್ಲಿನ ಅತ್ಯುತ್ತಮ ವಿವಾಹ ಸ್ಥಳಕ್ಕಾಗಿ ಬಾಲಿವುಡ್ ನೃತ್ಯ ಸಂಯೋಜಕಿ ಫರಾ ಖಾನ್, ಉದ್ಯಮಿ ಅಶ್ನೀರ್ ಗ್ರೋವರ್, ರಜನೀಶ್ ರಥಿ, ಸಿಇಒ ಫ್ಲೋರಿಯನ್ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಲಾಯಿತು.