ಜಿಲ್ಲೆ

ಸದಸ್ಯರಿಗೆ ಶೇ.11 ಲಾಭಾಂಶ

ಬೀದರ್: ಸದಸ್ಯರು ವ್ಯವಹಾರದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿ ಸತತ ಲಾಭದಲ್ಲಿ ಮುನ್ನುಗುತ್ತಿದೆ ಎಂದು ಸಹಕಾರಿ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಸಹಕಾರಿ ಬ್ಯಾಂಕ್‌ನ 23ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, 2001ರಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಸಹಕಾರಿ ಪ್ರಥಮ ವರ್ಷದಿಂದಲೇ ಲಾಭದಲ್ಲಿದೆ. ಸಣ್ಣವರಿಂದ ಹಿಡಿದು ದೊಡ್ಡ ವ್ಯಾಪಾರಿಗಳವರೆಗೆ ಸಾಲ ಸೌಲಭ್ಯ ನೀಡಲಾಗಿದೆ. ಸದಸ್ಯರಿಗೆ ಪ್ರಸಕ್ತ ಶೇ.11 ಲಾಭಾಂಶ ನೀಡಲಾಗುವುದು ಎಂದರು.
ಉಪಾಧ್ಯಕ್ಷ ಬಸವರಾಜ ಸ್ವಾಮಿ, ನಿರ್ದೇಶಕರಾದ ಪ್ರತಾಪ ತಂಬಾಕೆ, ಚಂದ್ರಪ್ಪ ಬಿರಾದಾರ್, ರಾಜು ಬೇಮಳಖೇಡಕರ್, ರುಮಾದೇವಿ ಹುಡೆದ್, ದೀಪಾ ಅಗ್ರವಾಲ್, ಒಕ್ಕೂಟದ ಸಿಇಒ ಅಮೃತ ಹೊಸಮನಿ, ಸಂಘದ ಸಿಬ್ಬಂದಿ ಅನೀಲಕುಮಾರ ಕೊಡಂಬಲ್. ಶಿವಾನಂದ, ಸಂಜಿವಕುಮಾರ, ಶ್ರೀಕಾಂತ, ದೇವಿ, ಮನ್ಮಥ ಬಿರಾದಾರ್, ಪವನಕುಮಾರ, ರವಿಕುಮಾರ ಲದ್ದೆ, ಸಂಗಪ್ಪ ಮಡಕಿ ಇತರರಿದ್ದರು.
ನಿರ್ದೇಶಕ ರಾಜಕುಮಾರ ಧುಮ್ಮನಸೂರೆ ಸ್ವಾಗತಿಸಿದರು. ಸಿಇಒ ಶಿವರಾಜ ಹೂಗಾರ ನಿರೂಪಣೆ ಮಾಡಿದರು. ವೀರಶೆಟ್ಟಿ ವಂದಿಸಿದರು. ಸಹಕಾರಿ ಸದಸ್ಯರ ಪ್ರತಿಭಾವಂತ ಮಕ್ಕಳಾದ ಪ್ರಾರ್ಥನಾ ಹಾಗೂ ಉತ್ತಮ ಗ್ರಾಹಕರಾದ ಬಸವರಾಜ ಬುಳ್ಳಾ, ವಿನಯಕುಮಾರ ಬಿರಾದಾರ್, ಕೀರ್ತಿ ರಾಜಕುಮಾರ, ವಿದ್ಯಾವತಿ ಪಡಸಾಲೆ, ಶ್ರೀಧರ ಬಡಶೇಷಿ, ಆನಂದ ರಾಯಣ್ಣ ಅವರನ್ನು ಸನ್ಮಾನಿಸಲಾಯಿತು.