ಕನಕಗಿರಿಯ 13ನೇ ವಾರ್ಡಿನಲ್ಲಿನ ಕರ್ನಾಟಕ ರತ್ನ ಪುನಿತ್ ರಾಜಕುಮಾರ ವೃತ್ತವನ್ನು ಅಲಂಕರಿಸಿರುವುದು. 
ಜಿಲ್ಲೆ

ಪುತ್ಥಳಿಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ

ಗಾಯತ್ರಿ ಮಾಲಿಪಾಟೀಲ್

ಕನಕಗಿರಿ: ಕರ್ನಾಟಕ ರತ್ನ ಪುನಿತ್ ರಾಜಕುಮಾರ ಅವರ 4ನೇ ವರ್ಷದ ಪುಣ್ಯತಿಥಿ ನಿಮಿತ್ತ ನಗರದ 14ನೇ ವಾರ್ಡಿನ ಅಭಿಮಾನಿಗಳು ಪುನಿತ್ ರಾಜಕುಮಾರ ವೃತ್ತದಲ್ಲಿ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಿದರು.ಗಂಗಾಪರಮೇಶ್ವರಿ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಅಪ್ಪು ಅಭಿಮಾನಿಗಳು ವೃತ್ತ ಬಳಿ ಸ್ವಚ್ಛಗೊಳಿಸಿ, ಅಲಂಕರಿಸಿ ಪುನಿತ್ ಅವರನ್ನು ಸ್ಮರಿಸಿದರು. ನಮ್ಮ ವಾರ್ಡಿನ ಬಹುತೇಕ ಸದಸ್ಯ ಡಾ.ರಾಜಕುಮಾರ ಕುಟುಂಬದ ಅಭಿಮಾನಿಗಳಾಗಿದ್ದು, ಅಪ್ಪು ಅವರನ್ನು ಅಷ್ಟೇ ಪ್ರೀತಿಸುತ್ತಿದ್ದೇವು. ಅವರ ಎಲ್ಲ ಚಿತ್ರಗಳನ್ನು ತಂಡೋಪತಂಡವಾಗಿ ತೆರಳಿ ನೋಡುತ್ತಿದ್ದೆವು. ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನೆಲ್ಲಾ ಅಗಲಿದ್ದು, ಚಿತ್ರರಂಗ ಬಡವಾಗಿದೆ. ಪುನಿತ್ ರಾಜಕುಮಾರ ಅವರ ಹುಟ್ಟುಹಬ್ಬ ಹಾಗೂ ಪುಣ್ಯತಿಥಿಯಂದು ಪೂಜೆ ಸಲ್ಲಿಸಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕನಕಪ್ಪ ತಿಳಿಸಿದರು. ಹನುಮೇಶ ಗಂಗಾಮತ, ತಿಮ್ಮಣ್ಣ ಇತರರಿದ್ದರು.