ಸೋಮವಾರಪೇಟೆ ತಾಲೂಕಿನ ಸಿದ್ಧಲಿಂಗಪುರ, ಅರಸಿನಕುಪ್ಪೆಯ ಶ್ರೀ ಮಂಜುನಾಥ ಸ್ವಾಮಿ ಮತ್ತು ನವನಾಗನಾಥ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.  
ಜಿಲ್ಲೆ

ಮಂಜುನಾಥ ಸ್ವಾಮಿ, ನವನಾಗನಾಥ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ

ಸೋಮವಾರಪೇಟೆ: ನಾಗರ ಪಂಚಮಿ ಪ್ರಯುಕ್ತ ಸಮೀಪದ ಸಿದ್ಧಲಿಂಗಪುರ, ಅರಸಿನಕುಪ್ಪೆಯ ಶ್ರೀ ಮಂಜುನಾಥ ಸ್ವಾಮಿ ಮತ್ತು ನವನಾಗನಾಥ ಸನ್ನಿಧಿಯಲ್ಲಿ ಮಂಗಳವಾರ ವಿವಿಧ ಪೂಜಾ ಕೈಂಕರ್ಯ ನೆರವೇರಿತು.

ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಗಣಪತಿ ಹೋಮ, ದೇವರಿಗೆ ಅಲಂಕಾರ ಪ್ರಜೆ, ತಂಬಿಲ ಸೇವೆ, ನಾಗರ ಪಂಚಮಿ ವಿಶೇಷ ಪ್ರಜೆ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದ ಗುರುಗಳಾದ ಶ್ರೀ ರಾಜೇಶ್‌ನಾಥ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ, ಅರ್ಚಕರಾದ ಹರಿ ಭಟ್, ವಾದಿ ಭಟ್ ಪೂಜಾ ಕಾರ್ಯಗಳನ್ನು ನಡೆಸಿದರು.

ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ರಮೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್, ಮಣಿ ಸ್ವಾಮಿ ಮತ್ತಿತರರು ಇದ್ದರು.