ಜಿಲ್ಲೆ

ಶ್ರೀ ಸಿದ್ಧಸಾಧು ಶಿವಯೋಗಿ ಪುಣ್ಯಾರಾಧನೆ

ರೋಣ: ಭಕ್ತರ ತೊಂದರೆ, ತಾಪತ್ರಯ, ಮಾನಸಿಕ ತೊಳಲಾಟ ದೂರ ಮಾಡಿ, ಸನ್ಮಾರ್ಗದ ದಾರಿ ತೋರಿದ ಮಹಾಮಹಿಮ, ಜ್ಞಾನಮೂರ್ತಿ ಶ್ರೀ ಸಿದ್ಧಸಾಧು ಶಿವಯೋಗಿಗಳ 97ನೇ ಪುಣ್ಯಾರಾಧನೆ ಜು. 14ರಂದು ಪಟ್ಟಣದ ಸಿದ್ಧಸಾಧು ಶಿವಯೋಗಿಗಳ ಮಠದಲ್ಲಿ ಜರುಗಲಿದೆ.

ಬೆಳಗ್ಗೆ 7 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ, 3 ಗಂಟೆಯಿಂದ ಶ್ರೀಗಳ ಭಾವಚಿತ್ರದ ಪಾಲ್ಕಿ ಮಹೋತ್ಸವ ನಡೆಯಲಿದೆ. ಮಠದ ಕಾರ್ಯಾಧ್ಯಕ್ಷ ಲೋಕಾಪುರ ಶಿವಾನಂದ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಗದಗ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ಹರಳಕಟ್ಟಿ ಬ್ರಹ್ಮ ವಿದ್ಯಾಶ್ರಮದ ಶಿವಾನಂದ ಸ್ವಾಮೀಜಿ, ಬೈಲಹೊಂಗಲ ಮಹಾದೇವ ಸ್ವಾಮೀಜಿ, ಇಬ್ರಾಹಿಂಪೂರದ ದಯಾನಂದ ಸ್ವಾಮೀಜಿ, ಶಿಸ್ವಿನಹಳ್ಳಿ ಶಿವಶರಣೆ ಶಾಂತಮ್ಮತಾಯಿ, ಹರಳಕಟ್ಟಿ ಕೃಪಾನಂದಾ ಸ್ವಾಮಿ ಸಾನ್ನಿಧ್ಯ ವಹಿಸುವರು. ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ, ಶ್ರೀಗಳ ಅಡ್ಡಪಲ್ಲಕಿ ಮೆರವಣಿಗೆ ನಡೆಯಲಿದೆ.