ಗುಂಡ್ಲುಪೇಟೆ: ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಮಾ. 14 ಮತ್ತು 15ರಂದು ಸದ್ಗುರು ಷಟ್ಥ್ಸಲ ಚಕ್ರವರ್ತಿ ಲಿಂಗೈಕ್ಯ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿಯ 75ನೇ ವಾರ್ಷಿಕ ಆರಾಧನೆ ನಡೆಯಲಿದೆ.
14ರಂದು ಗೋಕಾಕದ ಸಿದ್ದಸಂಸ್ಥಾನ ಪೀಠ ಸುಕ್ಷೇತ್ರ ಸಾವಳಗಿ ಮಠದಶಿವಲಿಂಗೇಶ್ವರ ಕುಮಾರೇಂದ್ರಸ್ವಾಮಿಗಳ ಸಮ್ಮುಖದಲ್ಲಿ ಆರಾಧನೆಯ ಕಾರ್ಯಕ್ರಮ ಜರುಗಲಿದೆ. ರಾತ್ರಿ 8 ಗಂಟೆಗೆ ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನದ ಮಹಾಂತ ಸ್ವಾಮೀಜಿಯ ಪುಷ್ಪಾಂಧೋಳಿಕ ಮಹೋತ್ಸವ ನಡೆಯಲಿದೆ.
15ರಂದು ನಡೆಯುವ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಗೋಪಾಲಪುರ ಕಬ್ಬಿನ ಕೊಲೆಶ್ವರ ಮಠದ ಗಂಗಾಧರ ಸ್ವಾಮೀಜಿ ಸೇರಿದಂತೆ ತಾಲೂಕಿನ ನಾನಾ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನ ಮಹಾಪ್ರಸಾದ ಏರ್ಪಡಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಠದ ಭಕ್ತಾದಿಗಳು ಭಾಗವಹಿಸಬೇಕು ಎಂದು ಸೋಮಹಳ್ಳಿ ಮಠಾಧ್ಯಕ್ಷ ಸಿದ್ದಮಲ್ಲಸ್ವಾಮೀಜಿ ಪ್ರಕಟಣೆಯಲ್ಲಿ ಕೋರಿದ್ದಾರೆ.