ಜಿಲ್ಲೆ

ಶ್ರೀ ಗುರುನಾಥರೂಢ ಸ್ವಾಮೀಜಿ ಪುಣ್ಯಾರಾಧನೆ

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳವರ ಕರಕಮಲ ಸಂಜಾತರಾದ ಮೌನಮುನಿ ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಗಳವರ 63ನೇ ಪುಣ್ಯಾರಾಧನೆ ಕಾರ್ಯಕ್ರಮ ಸೋಮವಾರ ಜರುಗಿತು.

ಈ ಸಂದರ್ಭದಲ್ಲಿ ಶಾಂತರೂಢನಾಡು ಎಂಬ ವಿಷಯದ ಕುರಿತು ಮಾತನಾಡಿದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಶಾಂತರು ಎಂದರೆ ಸದ್ಗುರುವಿನ ಸದ್​ಭಾವನೆ ಸೇವಾದಿಗಳನ್ನು ಮಾಡುವುದು. ಸದಾ ಸದ್ಗುರುವಿನ ಹತ್ತಿರ ಇರುತ್ತ, ಪುಣ್ಯ ಕಾರ್ಯದಲ್ಲಿ ನಿರತನಾಗಿದ್ದರೆ ಅವನು ಪರಿಶುದ್ಧ ಗುರು ಕರುಣೆಯನ್ನು ಪಡೆದು ಜ್ಞಾನವಂತನಾಗುತ್ತಾನೆ ಎಂದು ಹೇಳಿದರು.

ಶ್ರೀ ಶಾಂತಾನಂದ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಕೃಷ್ಣಾನಂದ ಸ್ವಾಮೀಜಿ, ಹೃಷಿಕೇಶದ ಶ್ರೀ ಶಿವಾನಂದ ಸ್ವಾಮೀಜಿ, ಮಹಾಲಿಂಗಪುರದ ಶ್ರೀ ಸಿದ್ಧಾನಂದ ಸ್ವಾಮೀಜಿ, ಸೊಲ್ಲಾಪುರದ ಮಾತೋಶ್ರೀ ಅರುಣಾ ಮಾತಾಜಿ, ಬೆಳಹೊಡದ ಶ್ರೀ ಭೀಷ್ಮಗೌಡರ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು. ಶ್ರೀಮಠದ ಚೇರ್ಮನ್ ಚನ್ನವೀರ ಮುಂಗುರವಾಡಿ, ವಿನಾಯಕ ಘೊಡ್ಕೆ, ಧರ್ಮದರ್ಶಿಗಳಾದ ಬಸವರಾಜ ಕಲ್ಯಾಣಶೆಟ್ಟರ, ಉದಯಕುಮಾರ ನಾಯಕ, ಸರ್ವಮಂಗಳಾ ಪಾಠಕ, ಶ್ರೀ ಮಠದ ಮ್ಯಾನೇಜರ್ ಈರಣ್ಣ ತುಪ್ಪದ, ಮಾಜಿ ಧರ್ಮದರ್ಶಿ ಎಸ್.ಐ. ಕೋಳಕೂರ ಹಾಗೂ ಇತರರು ಉಪಸ್ಥಿತರಿದ್ದರು.