ಜಿಲ್ಲೆ

ಮೈಸೂರಿನಲ್ಲಿ ಫೆ.17, 18 ರಂದು ಪುರಂದರ, ತ್ಯಾಗರಾಜ ಆರಾಧನೆ

ಮೈಸೂರು: ಸುರಭಿ ಗಾನ ಕಲಾಮಂದಿರ ವತಿಯಿಂದ ಫೆ.17, 18 ರಂದು ಒಂಟಿಕೊಪ್ಪಲು ಕಾಳಿದಾಸ ರಸ್ತೆಯ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಪುರಂದರ ಮತ್ತು ತ್ಯಾಗರಾಜ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಗೀತ ವಿದುಷಿ ಡಾ. ಸುಕನ್ಯಾ ಪ್ರಭಾಕರ್ ತಿಳಿಸಿದರು.

ಫೆ.17 ರಂದು ಮಧ್ಯಾಹ್ನ 3ಕ್ಕೆ ಪೂಜಾ ಕೈಂಕರ್ಯ, 3.30ಕ್ಕೆ ವಿಶೇಷ ಸಂಗೀತ ರೂಪಕ, ಫೆ.18 ರಂದು ಬೆ.8ಕ್ಕೆ ಪುರಂದರ ನವರತ್ನ ಕೃತಿಗಳ ಗೋಷ್ಠಿ ಗಾಯನ, 9ಕ್ಕೆ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, 10.15ಕ್ಕೆ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಪಿಟೀಲು ವಾದಕ ಎಚ್.ಕೆ. ನರಸಿಂಹಮೂರ್ತಿ ಹಾಗೂ ಕಲಾವಿದೆ ಶ್ರೀಮತಿ ಶಂಕರ್ ಅವರನ್ನು ಸನ್ಮಾನಿಸಲಾಗುವುದು. ಅತಿಥಿಗಳಾಗಿ ಗಾನಭಾರತೀ ಅಧ್ಯಕ್ಷೆ ಡಾ.ರಮಾ ವಿ.ಬೆಣ್ಣೂರ್, ಶ್ರೀಕೃಷ್ಣ ಗಾನಸಭಾ ಅಧ್ಯಕ್ಷ ಶ್ರೀಧರ್‌ರಾಜೇ ಅರಸ್ ಪಾಲ್ಗೊಳ್ಳಲಿದ್ದಾರೆ. ಬೆ.11ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.