ಜಿಲ್ಲೆ

ಗೋಪಾಲದಾಸರ ಆರಾಧನೆ ಇಂದು

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ದಾಸವರೇಣ್ಯರಾದ ಶ್ರೀ ಗೋಪಾಲದಾಸರ ಆರಾಧನೆ ಪಟ್ಟಣದ ದಿ.ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಲ್ಲಿ ಮಂತ್ರಾಲಯ ಪಾದಯಾತ್ರೆ ಸಂಘದ ಆಶ್ರಯದಲ್ಲಿ ಜ.22ರಂದು ಬೆಳಗ್ಗೆ 8 ಗಂಟೆಯಿಂದ ಆಚರಿಸಲಾಗುತ್ತದೆ. 10 ಗಂಟೆಯವರೆಗೆ ಶ್ರೀ ಧನ್ವಂತರಿ ಹೋಮ ಹಾಗೂ ಶ್ರೀ ಲಕ್ಷ್ಮೀನಾರಾಯಣ ಹೋಮ ನೆರವೇರಲಿವೆ. ನಂತರ ಅಷ್ಟೋತ್ತರ, ಪಂಚಾಮೃತ, ಪೂಜೆ, ನೈವೇದ್ಯ ಹಸ್ತೋದಕ ಹಾಗೂ ಪ್ರಸಾದ ಕಾರ್ಯ ನಡೆಯಲಿವೆ. ಸಂಜೆ 6ಗಂಟೆಯಿಂದ 8ರ ವರೆಗೆ ಭಜನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಲ್ಹಾದರಾವ್ ಕುಲಕರ್ಣಿ ತಿಳಿಸಿದ್ದಾರೆ.