ಅಣ್ಣಿಗೇರಿ: ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಇಲ್ಲಿನ ರುದ್ರಮುನೀಶ್ವರ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ಕುರಬಗೇರಿ ಓಣಿಯ ಶ್ರೀ ಹಿರೇಮಾರುತೇಶ್ವರ ನವೀಕೃತ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ಗೋಪುರ ಕಳಸಾರೋಹಣ, ರಥೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ 4ನೇ ದಿನದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದ ಹುಚ್ಚರೇಶ್ವರ ಮಠದ ಷಣ್ಮುಖ ಅಜ್ಜನವರು ಮಾತನಾಡಿದರು. ನಾಗಲಿಂಗಪ್ಪ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಶಲವಡಿ ಗ್ರಾಮದ ಶ್ರೀ ವೀರಯ್ಯ ಶಾಸ್ತ್ರಿಗಳು ಚರಂತಿಮಠ ಪ್ರವಚನ ನಡೆಸಿಕೊಟ್ಟರು. ಬಾಗಲಕೋಟೆಯ ಮಹೇಶಕುಮಾರ ಹಿರೇಮಠ ಸಂಗೀತ ಪ್ರಸ್ತುತಪಡಿಸಿದರು. ಚಿತ್ರದುರ್ಗದ ಜ್ಞಾನಮೂರ್ತಿ ತಬಲಾ ಸಾಥ್ ನೀಡಿದರು.
ಬಸಪ್ಪ ಇಟಗಿ, ರಾಯಪ್ಪ ದೊಡ್ಡಮನಿ, ರಾಮಣ್ಣ ಮಾಯಣ್ಣವರ, ಅಶೋಕ ಮಾಯಣ್ಣವರ, ಹನುಮಂತಪ್ಪ ಕರಟ್ಟಿನವರ, ಮುತ್ತಪ್ಪ ಅಕ್ಕಿ, ಪ್ರಶಾಂತಭಟ್ಟ ಹಂದಿಗೋಳ, ಇತರರಿದ್ದರು. ರವಿರಾಜ ವೆರ್ಣೆಕರ ನಿರೂಪಿಸಿದರು. ನಿಜಗುಣೆಪ್ಪ ಅಕ್ಕಿ ಸ್ವಾಗತಿಸಿದರು. ನಿಂಗಪ್ಪ ಬಡ್ಡೆಪ್ಪನವರ ವಂದಿಸಿದರು.