ಹಾನಗಲ್ಲ: ಪಟ್ಟಣದ ವಿರಾಟ್ ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ಜಾಗದಲ್ಲಿ ಭಗವಾ ಧ್ವಜಾರೋಹಣ ಹಾಗೂ ಭಾರತಮಾತಾ, ಗಣೇಶ ಪೂಜೆ ನೆರವೇರಿಸಲಾಯಿತು. ಪಟ್ಟಣದ ಹಿರಿಯರಾದ ಫಕೀರಪ್ಪ ಬೆಂಚಳ್ಳಿ ಹಾಗೂ ನರಸಪ್ಪ ಬಾಯಮ್ಮನವರ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ವಿವರ ನೀಡಿದ ಸಂಘಟನಾ ಪ್ರಮುಖ ರವಿಚಂದ್ರ ಪುರೋಹಿತ ಆ. 27ರಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದ್ದು, 21 ದಿನಗಳ ಕಾಲ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. 4ರಂದು ಬೆಳಗ್ಗೆ ಸಹಸ್ರ ಮೋದಕ ಗಣಹೋಮ ನಡೆಯಲಿದೆ. ಸೆ. 10ರಂದು ಧರ್ಮಸಭೆ ಆಯೋಜಿಸಲಾಗಿದೆ. ವಿಶ್ವ ಹಿಂದು ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗೋಪಾಲ್ಜಿ ಮತ್ತು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಆಗಮಿಸಲಿದ್ದಾರೆ. 11ರಂದು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಚಲನಚಿತ್ರ ಗಾಯಕಿ ಶಮಿತಾ ಮಲ್ನಾಡ್ ತಂಡದವರಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿವೆ. ಚಂದನ ಟಿವಿಯ ಕಲಾವಿದೆ ಸಂಧ್ಯಾ ಗಿರೀಶ ಅವರಿಂದ ಸುಗಮ ಸಂಗೀತ ಪ್ರಸ್ತುತಗೊಳ್ಳಲಿದೆ. 14ರಂದು ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ. 16ರಂದು ಮಧ್ಯಾಹ್ನ ವಿವಿಧ ಕಲಾ ತಂಡಗಳು ಮತ್ತು ಮಂಗಲ ವಾದ್ಯಗಳೊಂದಿಗೆ ಗಣೇಶ ವಿಸರ್ಜನೆ ನೆರವೇರಲಿದೆ ಎಂದು ವಿವರಿಸಿದರು.
ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಪ್ರಮುಖರಾದ ಸಿದ್ದಲಿಂಗಣ್ಣ ಕಮಡೊಳ್ಳಿ, ಕಲ್ಯಾಣಕುಮಾರ ಶೆಟ್ಟರ್, ರಾಜು ಗೌಳಿ, ಗಣೇಶ ಮೂಡ್ಲಿಯವರ, ರಾಮು ಯಳ್ಳೂರ, ಜಗದೀಶ ಸಿಂಧೂರ, ಬಾಳಣ್ಣ ಸುಗಂಧಿ, ಸಂಜು ಬೇದ್ರೆ, ಯಲ್ಲಪ್ಪ ಶೇರಖಾನಿ, ಶ್ರೀನಿವಾಸ ಬಂಕನಾಳ, ಕೃಷ್ಣಾ ಹುನಗನಹಳ್ಳಿ ಹಾಗೂ ಸಮಿತಿ ಸದಸ್ಯರು ಇದ್ದರು. ರವಿ ಪುರದ ಕಾರ್ಯಕ್ರಮ ನಿರ್ವಹಿಸಿದರು.