ಮಾನ್ವಿಯಲ್ಲಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಶಾಸಕ ಹಂಪಯ್ಯನಾಯಕ, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಧರ್ಮಗುರು ಸೈಯಾದ್ ಜೀಶನ್ ಖಾದ್ರಿ, ಲೊಯಾಲ ಶಿಕ್ಷಣ ಸಂಸ್ಥೆಯ ಫಾದರ್ ಜಾರೋಡ್ ಡಿಸೋಜ, ಪ್ರಮುಖರಾದ ಖಾಲಿದ್ ಖಾದ್ರಿ, ಬುಡ್ಡಪ್ಪನಾಯಕ, ಎಚ್.ಶರ್ಫುದಿನ್ ಪೋತ್ನಾಳ ಇತರರಿದ್ದರು. 
ಜಿಲ್ಲೆ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ

ಮಾನ್ವಿ: ಪ್ರತಿಯೊಬ್ಬ ನಾಗರಿಕರು ದೇಶದ ಸಂವಿಧಾನದ ಕುರಿತು ತಿಳಿದುಕೊಂಡು ಅದನ್ನು ಪಾಲಿಸಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ಟಿಎಪಿಎಂಎಂಎಸ್ ಆವರಣದಲ್ಲಿ ತಾಲೂಕು ಸಂವಿಧಾನ ಉತ್ಸವ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 75ನೇ ಸಂವಿಧಾನ ಸಮರ್ಪಣಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಭಿನ್ನ ಸಂಸ್ಕೃತಿ ಹಾಗೂ ಸೌಹಾರ್ಧತೆಯಿಂದ ಬದುಕಲು ಅಗತ್ಯವಿರುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ ಎಂದರು.

ವಕೀಲ ಯಲ್ಲಪ್ಪ ಹಿರೇಬಾದರದಿನ್ನಿ, ಚಿಂತಕ ವಿಜಯಬಾಬು ಪಾಟೀಲ್ ಸಂವಿಧಾನ ಸಮರ್ಪಣಾ ದಿನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಂವಿಧಾನ ಜಾಗೃತಿ ಮೆರವಣಿಗೆ ನಡೆಯಿತು. ಫಾದರ್ ಡಾ.ಪ್ರೇಮ ಬೋ, ಫಾದರ್ ಸತೀಶ ನಾರ್ಂಡಿಸ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀ, ತಹಸೀಲ್ದಾರ್ ರಾಜು ಪಿರಂಗಿ, ಪ್ರಮುಖರಾದ ಪಿ.ಐ.ವೀರಭದ್ರಯ್ಯ ಹಿರೇಮಠ, ರಾಜಾ ರಾಮಚಂದ್ರನಾಯಕ, ಬಾಲಸ್ವಾಮಿ ಕೊಡ್ಲಿ, ತಿಪ್ಪಣ್ಣ ಬಾಗಲವಾಡ ಇತರರಿದ್ದರು.