ಜಿಲ್ಲೆ

ತ್ರಿಪದಿಗಳಲ್ಲಿದೆ ಸರ್ವಜ್ಞನ ಲೋಕಾನುಭವ

ಹಿರೇಕೆರೂರ: ತ್ರಿಪದಿಗಳಲ್ಲಿ ಲೋಕಾನುಭವವನ್ನು ಬಹಳ ಸರಳ ಮತ್ತು ಮಾರ್ಮಿಕವಾಗಿ ಸರ್ವಜ್ಞ ನಿರೂಪಿಸಿದ್ದಾರೆ. ಸಮಾಜಕ್ಕೆ ಅವರ ವಚನಗಳು ದಾರಿದೀಪಗಳಾಗಿವೆ ಎಂದು ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ ಹೇಳಿದರು.

ತಾಲೂಕಿನ ಸರ್ವಜ್ಞನ ಅಬಲೂರು ಗ್ರಾಮದಲ್ಲಿ ಸರ್ವಜ್ಞ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸರ್ವಜ್ಞ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಇಚ್ಛಾಶಕ್ತಿ ತೋರುವ ಮೂಲಕ ಸರ್ವಜ್ಞನ ಚಿಂತನೆಗಳು ಹಾಗೂ ಕ್ಷೇತ್ರಗಳ ಅಭಿವೃದ್ಧಿಗಾಗಿ ಗಮನ ನೀಡಬೇಕು ಎಂದರು.

ಪ್ರಾಧ್ಯಾಪಕ ಡಾ. ಎಸ್.ಪಿ. ಗೌಡರ ಮಾತನಾಡಿ, ಇಡೀ ನಾಡಲ್ಲಿ ಅಲೆದಾಡಿ ವಿಚಾರಗಳನ್ನು ಮಂಡಿಸಿದ ಕವಿ ಸರ್ವಜ್ಞ. ಹೀಗಾಗಿ, ಇಂದಿಗೂ ಅವರ ತ್ರಿಪದಿಗಳು ಪ್ರಸ್ತುತವಾಗಿವೆ. ಸರ್ವಜ್ಞನ 2 ಸಾವಿರ ವಚನಗಳನ್ನು ಉತ್ತಂಗಿ ಚನ್ನಪ್ಪನವರು ಸಂಗ್ರಹಿಸಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ಮಹಾದೇವಪ್ಪ ವೀರಾಪುರ, ಸದಸ್ಯರಾದ ಉಜ್ಜನಗೌಡ ಮಳವಳ್ಳಿ, ಹನುಮಂತಪ್ಪ ಹರಿಜನ, ಗೀತಾ ಇಂಗಳಗೊಂದಿ, ಯಲ್ಲಮ್ಮ ಆಡೂರ, ಕಸಾಪ ತಾಲೂಕು ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಚನ್ನಬಸಪ್ಪ ಚಕ್ರಸಾಲಿ, ಡಾ. ಬಸವರಾಜ ಪೂಜಾರ, ಶಿಕ್ಷಕ ಎನ್.ಎಸ್. ಹೆಗ್ಗೇರಿ, ಬಸವರಾಜ ಮಳವಳ್ಳಿ, ಮಹಾಲಿಂಗಪ್ಪ ಗುಳಲಕಾಯಿ, ಶಂಕ್ರಪ್ಪ ಗೌಡ್ರ, ಸುರೇಶ ಕುರುವತ್ತೇರ, ರೂಪಾ ಆಡೂರ, ರುದ್ರಮುನಿ ಕಣವೇರ, ಮಂಜುನಾಥ ಕಣವೇರ, ಸರ್ವಜ್ಞ ಯುವಕ ಸಂಘದ ಪದಾಧಿಕಾರಿಗಳು, ಇತರರು ಇದ್ದರು.