ಉಡುಪಿ: ನಮ್ಮ ಮನೆಯಲ್ಲಿರುವ ಹಾಗೂ ಸುತ್ತಮುತ್ತಲಿರುವ ಹಿರಿಯ ನಾಗರಿಕರನ್ನು ಎಲ್ಲರೂ ಗೌರವಿಸಲೇಬೇಕು. ಸಂಧ್ಯಾ ಕಾಲದಲ್ಲಿರುವ ಅವರಿಗೆ ಆಸ್ತಿ-ಸಂಪತ್ತು ಯಾವುದೂ ಬೇಡ. ಅವರಿಗೆ ಬೇಕಿರುವುದು ನಾಲ್ಕಾರು ಸಾಂತ್ವನದ ಮಾತು. ಜಿಲ್ಲೆಯ ಹಿರಿಯ ನಾಗರಿಕರು ಯಾವುದೇ ವಿಚಾರ&ವಿಷಯದಲ್ಲಿ ಭಯಗೊಳ್ಳುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಭಯ ನೀಡಿದರು.
ಉಡುಪಿಲ್ಲಿ ಜಿಲ್ಲಾಡಳಿತ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಕಾನೂನು ಸೇವಾ ಪ್ರ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್., ಕನ್ನಡ ಮತ್ತು ಸಂಸತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಧಿಕಾರಿಗಳಾದ ಬಿ.ಎಚ್.ಕೃಷ್ಣಪ್ಪ, ರಾಮದಾಸ್ ಕೆ.ಜಿ., ವಕೀಲರ ಸಂದ ಅಧ್ಯಕ್ಷ ರೊನಾಲ್ಡ್ ಪ್ರವಿಣಕುಮಾರ್, ಡಾ. ಪಿ.ವಿ. ಭಂಡಾರಿ, ನಿರಂಜನ ಭಟ್, ಸದಾನಂದ ಹೆಗಡೆ, ವಾಸುದೇವ ರಾವ್, ಸರಳಾ ಕಾಂಚನ್, ಸದಾನಂದ ಶೆಟ್ಟಿ ಇತರರು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಲಾ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ ಹಾಗೂ ಗಾಯಕ ಗಣೇಶ ಗಂಗೊಳ್ಳಿ ವಿವಿಧ ಸುಮಧುರ ಹಾಡುಗಳನ್ನು ಹೇಳುವ ಮೂಲಕ ಸೇರಿದ್ದ ನೂರಾರು ಹಿರಿಯರನ್ನು ರಂಜಿಸಿದರು.