ಜಿಲ್ಲೆ

ವಿಶ್ವ ಸಂಸ್ಕೃತ ದಿನೋತ್ಸವ ಜಾಥಾ

Davangere - Desk - Mahesh Babu E

ಚಿತ್ರದುರ್ಗ: ನಗರದ ಕಬೀರಾನಂದ ಸಂಸ್ಕೃತ ಪಾಠಶಾಲೆಯಿಂದ ವಿಶ್ವ ಸಂಸ್ಕೃತ ದಿನೋತ್ಸವದ ಅಂಗವಾಗಿ ನಗರದಲ್ಲಿ ಬುಧವಾರ ಜಾಥಾ ಏರ್ಪಡಿಸಲಾಗಿತ್ತು.

ಶಾಲೆಯಿಂದ ಆರಂಭವಾದ ಜಾಥಾ ಫಿಲ್ಟರ್‌ಹೌಸ್, ಏಕನಾಥೇಶ್ವರಿ ಪಾದಗುಡಿ, ಉಚ್ಚಂಗಿ ಯಲ್ಲಮ್ಮ ದೇವಾಲಯ, ದೊಡ್ಡಪೇಟೆ, ರಂಗಯ್ಯನ ಬಾಗಿಲು, ಉಜ್ಜನಿಮಠ, ಕರುವಿನ ಕಟ್ಟೆ ವೃತ್ತದ ಮೂಲಕ ಕಬೀರಾನಂದಾಶ್ರಮದ ಬಳಿ ಮುಕ್ತಾಯಗೊಂಡಿತು. ಸಂಸ್ಕೃತ ಶಾಲೆ ಮುಖ್ಯಶಿಕ್ಷಕ ಗಣಪತಿಶಾಸ್ತ್ರಿ, ಶಿಕ್ಷಕರಾದ ಪಿ.ಕೆ.ಸುಮನಾ, ಆರ್.ಹೇಮಾವತಿ, ಸುಬ್ರಾರಾಯ್‌ಭ ಟ್, ಮಂಜುನಾಥ್ ಮತ್ತಿತರರು ಇದ್ದರು.

ಸಂಸ್ಕೃತ ಕಲಿಕೆಯ ಮಹತ್ವವನ್ನು ಸಾರುವ ಭಿತ್ತಿಪತ್ರಗಳೊಂದಿಗೆ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.