ಜಿಲ್ಲೆ

ವಿಶ್ವ ರೇಬಿಸ್​ ದಿನ ಕುರಿತ ಫೋನ್-ಇನ್​ ಯಶಸ್ವಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳವಾವಿ: ಕೆಎಲ್​ಇ ವೇಣುಧ್ವನಿ 90.4 ಎಫ್​.ಎಂ. ಕೇಂದ್ರವು ಮತ್ತು ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಸಹಯೋಗದಲ್ಲಿ ಶನಿವಾರ ವಿಶ್ವ ರೇಬಿಸ್​ ದಿನದ ಕುರಿತು ನೇರ ಫೋನ್​&ಇನ್​ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಯಿತು.

ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಆನಂದ ಪಾಟೀಲ ಭಾಗವಹಿಸಿ ರೇಬಿಸ್​ (ಹುಚ್ಚುನಾಯಿ ರೋಗ) ಕುರಿತು ಜಾಗೃತಿ ಮೂಡಿಸಿದರು.

ಹುಚ್ಚುನಾಯಿ ರೋಗ ಅಥವಾ ರೇಬಿಸ್​ ಪ್ರಾಣಿಜನ್ಯ ರೋಗವಾಗಿದ್ದು, ಹುಚ್ಚು ಪ್ರಾಣಿಗಳ ಕಡಿತದಿಂದ ಲಿಸ್ಸಾ ಎಂಬ ವೈರಾಣುವಿನಿಂದ ಹರಡುತ್ತದೆ. ಇದು ಮಾರಣಾಂತಿಕವಾಗಿದ್ದು, ಈ ರೋಗಕ್ಕೆ ಲಸಿಕೆ ಕಂಡು ಹಿಡಿದ ಫ್ರೆಂಚ್​ ವಿಜ್ಞಾನಿ ಲೂಹಿಸ್​ ಪಾಶ್ಚರ್​ ಪುಣ್ಯತಿಥಿ ದಿನವನ್ನು ವಿಶ್ವದಾದ್ಯಂತ ಪ್ರತಿ ವರ್ಷ ಸೆ.28ರಂದು ವಿಶ್ವ ರೇಬಿಸ್​ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ರೋಗ ಹರಡುವ ವಿಧಾನ, ರೋಗದ ಲಕ್ಷಣಗಳು, ಉದ್ರೇಕಿತ ನಾಯಿಯ ಹುಚ್ಚು ಲಕ್ಷಣಗಳು, ಮೂಕ ನಾಯಿ ಹುಚ್ಚು ಲಕ್ಷಣಗಳು, ಇತರ ಜಾನುವಾರುಗಳಲ್ಲಿ ಕಂಡು ಬರುವ ರೋಗದ ಲಕ್ಷಣಗಳು, ಮನುಷ್ಯರಲ್ಲಿ ಕಂಡುಬರುವ ಲಕ್ಷಣಗಳ ಕುರಿತು ಮತ್ತು ಪ್ರಥಮ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ.ಎಸ್​., ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.