ಹೊರ್ತಿ ಸಮೀಪದ ಏಳಗಿ (ಪಿಎಚ್) ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಶಾಸಕ ವಿಠ್ಠಲ ಕಟಕಧೋಂಡ ಉದ್ಘಾಟಿಸಿದರು. ಜೈನಾಪುರದ ಶ್ರೀ ರೇಣುಕಾ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇತರರಿದ್ದರು. 
ಜಿಲ್ಲೆ

ಅಧ್ಯಾತ್ಮದಿಂದಲೇ ವಿಶ್ವ ಶಾಂತಿ ಸಾಧ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಹೊರ್ತಿ: ಆಧ್ಯಾತ್ಮದಿಂದಲೇ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅಭಿಪ್ರಾಯ ವ್ಯಕ್ತಪಡಿಸಿದರು.

ಏಳಗಿ (ಪಿಎಚ್) ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆ -ಉತ್ಸವಗಳು ಸನ್ಮಾರ್ಗ ತೋರುತ್ತವೆ ಎಂದರು.

ಜೈನಾಪುರದ ಶ್ರೀ ರೇಣುಕಾ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ತಡವಲಗಾದ ಚಳಕಾಪುರ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ತದ್ದೇವಾಡಿಯ ಮಹಾಂತೇಶ ಹಿರೇಮಠ ಶಾಸ್ತ್ರಿಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಹೊರ್ತಿ ಶಾಂತೇಶ್ವರ ಸಹಕಾರಿ ಸಂಘ ಅಧ್ಯಕ್ಷ ಶ್ರೀಮಂತ ಇಂಡಿ, ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಲ್. ಚವ್ಹಾಣ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಂ.ಆರ್. ಪಾಟೀಲ, ನಾಗೇಂದ್ರ ಬಿರಾದಾರ, ಶಶಿಧರ ಕಲ್ಯಾಣಶೆಟ್ಟಿ, ಅಶೋಕ ಕುಲಕರ್ಣಿ, ಧನರಾಜ ಮುಜಗೊಂಡ, ಚಂದ್ರಕಾಂತ ರಾಂಪುರ, ಸಾಹೇಬಗೌಡ ಬಿರಾದಾರ, ತುಕಾರಾಮ ಬೇಗಾರ, ಅಶೋಕಗೌಡ ಪಾಟೀಲ ಪಾಲ್ಗೊಂಡಿದ್ದರು.