ಜಿಲ್ಲೆ

ಕನ್ನಡವನ್ನು ವಿಶ್ವವ್ಯಾಪಿಗೊಳಿಸಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ವಿ. ನೆಗಳೂರ ಸಲಹೆ

Bengaluru Rural

ನೆಲಮಂಗಲ: ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಸಂಘಟಿಸಿ, ವಿಶ್ವವ್ಯಾಪಿಗೊಳಿಸಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ವಿ. ನೆಗಳೂರ ಸಲಹೆ ನೀಡಿದರು.

ಬೆಂಗಳೂರು ಉತ್ತರ ತಾಲೂಕು ದಾಸನಪುರದ ವೈಷ್ಣವ ಸಭಾದ ಶ್ರೀನಿವಾಸ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ್ದ ನಾಡೋಜ ಮಹೇಶ್ ಜೋಷಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಮಹೇಶ್ ಜೋಷಿ ಅವರು ಶ್ರೀನಿವಾಸ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಆಚಾರ್ಯ ಗುರುಪರಂಪರಾ ವಿದ್ಯಾಲಯದ ಅಧ್ಯಕ್ಷ ಎನ್. ರಂಗಾಚಾರ್ ಮಾತನಾಡಿ, ರಾಜ್ಯಾದ್ಯಂತ ಎಲ್ಲ ಶಾಲೆ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಅಧ್ಯಯನಕ್ಕೆ ಪ್ರೇರಣೆ ನೀಡುವ ಕಾರ್ಯಕ್ರಮವನ್ನು ರೂಪಿಸಬೇಕಿದೆ. ವಿದ್ಯಾರ್ಥಿದಿಸೆಯಿಂದಲೆ ಸಾಹಿತ್ಯಾಸಕ್ತಿ ಸೃಷ್ಟಿಯಾಗುವಂತೆ ಮಾಡಬೇಕು ಎಂದರು.

ಆಚಾರ್ಯ ಗುರುಪರಂಪರಾ ವಿದ್ಯಾಲಯದ ಆಡಳಿತ ಅಧಿಕಾರಿ ವಿಷ್ಣುಚಿತ್ತ, ಕಲಾವಿದ ಸಾಹಿತಿ ಸಂತೋಷ್ ದಾವಣಗೆರೆ ಮತ್ತಿತರರಿದ್ದರು.