ವಿಶ್ವ ಸಾಗರ ದಿನಾಚರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮರವಂತೆ ಕಡಲ ತೀರವನ್ನು ಸ್ವಚ್ಛಗೊಳಿಸಲಾಯಿತು 
ಜಿಲ್ಲೆ

ಮರವಂತೆಯಲ್ಲಿ ವಿಶ್ವ ಸಾಗರ ದಿನಾಚರಣೆ

ಗಂಗೊಳ್ಳಿ: ಎಚ್‌ಸಿಎಲ್ ಫೌಂಡೇಶನ್ ಮತ್ತು ರೀಫ್ ವಾಚ್ ಸಂಸ್ಥೆ ಸಹಭಾಗಿತ್ವದಲ್ಲಿ ಮರವಂತೆ ಗ್ರಾಮ ಪಂಚಾಯಿತಿ, ತ್ರಾಸಿ ಕ್ಲೀನ್ ಕಿನಾರ, ಕರಾವಳಿ ಪೊಲೀಸ್ ಕಾವಲು ಪಡೆ ಗಂಗೊಳ್ಳಿ, ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಮರವಂತೆ, ಸಮೃದ್ಧ ಬೈಂದೂರು ಕ್ಲೀನ್ ಕಿನಾರ ಸಹಯೋಗದಲ್ಲಿ ವಿಶ್ವ ಸಾಗರ ದಿನಾಚರಣೆ ಪ್ರಯುಕ್ತ ಮರವಂತೆ ಕಡಲ ತೀರವನ್ನು ಸ್ವಚ್ಛಗೊಳಿಸಲಾಯಿತು.
ಪಂಚಾಯತ್‌ರಾಜ್ ಸಂಪನ್ಮೂಲ ವ್ಯಕ್ತಿ ಎಸ್.ಜನಾರ್ದನ್ ಮರವಂತೆ ಕಡಲ ತೀರ ಸ್ವಚ್ಛತೆಯಲ್ಲಿ ಪಾಲ್ಗೊಂಡ ತಂಡಗಳನ್ನು ಗೌರವಿಸಿದರು. ರೀಫ್‌ವಾಚ್ ಸಂಸ್ಥೆಯ ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.