ಭುವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಆರ್.ಪ್ರಕಾಶ್, ಸರೋಜಾ, ಡಿ.ಮಂಜು, ನಾಗಮಣಿ ಇದ್ದರು.  
ಜಿಲ್ಲೆ

ವಿಶ್ವ ಮಲೇರಿಯಾ ವಿರೋಧಿ ಮಾಸಾಚರಣೆ

ಅಭಿನಯ್ ಎಚ್.ಎಂ

ಬೆಟ್ಟದಪುರ: ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸುವ ಮೂಲಕ ಅರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಪಿರಿಯಾಪಟ್ಟಣ ತಾಲೂಕು ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಣಾಧಿಕಾರಿ ಕೆ.ಆರ್.ಪ್ರಕಾಶ್ ಹೇಳಿದರು.

ಸಮೀಪದ ಭುವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯಿಂದ ಆಯೋಜಿಸಿದ ವಿಶ್ವ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳು ಮಲೇರಿಯಾ, ಡೆಂಘೆಯಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಮನೆಯವರಿಗೆ ಹಾಗೂ ಸುತ್ತಮುತ್ತದ ನಿವಾಸಿಗಳಿಗೆ ಅರಿವು ಮೂಡಿಸಬೇಕು ಎಂದರು.

ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ. ವಿಪರೀತ ಜ್ವರ, ಮೈ ಬೆವರುವುದು, ವಾಂತಿ, ಮೈಕೈ ನೋವು, ನಿಶ್ಶಕ್ತಿ ಇದರ ಪ್ರಮುಖ ಲಕ್ಷಣ. ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಅಗತ್ಯ. ರಾತ್ರಿ ಮಲಗುವಾಗ ವೇಳೆ ಸೊಳ್ಳೆ ಪರದೆ ಬಳಸುವುದು ಅಗತ್ಯ ಎಂದು ಸಲಹೆ ನೀಡಿದರು.

ಭುವನಹಳ್ಳಿ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಕೆ.ಆರ್.ಶಶಿ ಮಾತನಾಡಿ, ಜ್ವರ ಕಾಣಿಸಿಕೊಂಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಲೇಪನ ಸಂಗ್ರಹಿಸಿ ಪರೀಕ್ಷಿಸಲಾಗುತ್ತದೆ. ಹಳ್ಳಿಗಳ ನಿವಾಸಿಗಳಿಗೆ ಬಿಟ್ಟುಬಿಡದೆ ಜ್ವರ ಕಾಡಿದರೆ ಆರೋಗ್ಯ ಸಹಾಯಕರು ಅಥವಾ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರೆ ಮನೆ ಬಾಗಿಲಿಗೆ ಬಂದು ರಕ್ತದ ಮಾದರಿ ಪರೀಕ್ಷೆಗೊಳಪಡಿಸುತ್ತಾರೆ. ಹಾಗಾಗಿ ಸಾಂಕ್ರಾಮಿಕ ರೋಗದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿ ಇರಬೇಕು ಎಂದರು.

ಮುಖ್ಯಶಿಕ್ಷಕಿ ಸರೋಜಾ, ಆರೋಗ್ಯ ನಿರೀಕ್ಷಾಧಿಕಾರಿ ಡಿ.ಮಂಜು, ಆಶಾ ಕಾರ್ಯಕರ್ತೆ ನಾಗಮಣಿ ಇತರರು ಇದ್ದರು